• January 1, 2026

ಜೂ.NTR ತೆಲುಗು ಚಿತ್ರರಂಗದ ರತ್ನ: ಅಮಿತ್ ಶಾ

ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಟ ಜೂನಿಯರ್ ಎನ್ ಟಿ ಆರ್ ರನ್ನು ಭೇಟಿ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ತೆಲುಗು ಚಿತ್ರರಂಗದಲ್ಲಿ ನೀವೊಂದು ರತ್ನ ಎಂದು ಹಾಡಿ ಹೊಗಳಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ತೆಗೆದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಜೂನಿಯರ್ ಎನ್ ಟಿ ಆರ್ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ. ಕೆಲಸದ ನಿಮಿತ್ತ ಅಮಿತ್ ಶಾ ಅವರು ತೆಲಂಗಾಣಕ್ಕೆ ಬಂದಿದ್ದಾರೆ. ಈ ವೇಳೆ ಜೂನಿಯರ್ ಎನ್ ಟಿ ಆರ್ ರನ್ನು ಭೇಟಿ ಮಾಡಿದ್ದು, ಈ ವೇಳೆ ಜೂ.ಎನ್‍ಟಿಆರ್ ಅವರನ್ನು ತೆಲುಗು ಚಿತ್ರರಂಗಕ್ಕೆ ನೀವೊಂದು ರತ್ನ ಮತ್ತು ಅಪ್ರತಿಮ ಪ್ರತಿಭಾವಂತ ನಟ ಎಂದು ಹೊಗಳಿದ್ದಾರೆ. ಜೂನಿಯರ್ ಎನ್‍ಟಿಆರ್ ಅವರೊಂದಿಗೆ ಕುಳಿತುಕೊಂಡು ಮಾತನಾಡುತ್ತಿರುವ ಫೋಟೋಗಳನ್ನು ಅಮಿತ್ ಶಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಬಹಳ ಪ್ರತಿಭಾವಂತ ನಟ ಮತ್ತು ನಮ್ಮ ತೆಲುಗು ಚಿತ್ರದ ರತ್ನವಾಗಿರು ಜೂನಿಯರ್ ಎನ್‍ಟಿಆರ್ ಜೊತೆಗೆ ಹೈದರಾಬಾದ್‍ನಲ್ಲಿ ಸಂಭಾಷಣೆ ನಡೆಸುತ್ತಿದ್ದೇನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಕೆಲವೇ ಗಂಟೆಗಳಲ್ಲಿ 14 ಸಾವಿರಕ್ಕೂ ಅಧಿಕ ಜನರು ಇದನ್ನು ರೀ-ಟ್ವೀಟ್​ ಮಾಡಿದ್ದಾರೆ. ಅಲ್ಲದೆ ‘ನಿಮ್ಮ ಒಳ್ಳೆಯ ಮಾತುಗಳಿಗೆ ಧನ್ಯವಾದಗಳು. ನಿಮ್ಮನ್ನು ಭೇಟಿ ಮಾಡಿ ಮಾತನಾಡಿದ್ದಕ್ಕೆ ಖುಷಿ ಆಯಿತು’  ಎಂದು ಜ್ಯೂ. ಎನ್​ಟಿಆರ್​ ಟ್ವೀಟ್​ ಮಾಡಿದ್ದಾರೆ. ತೆಲುಗು ದೇಶಂ ಪಕ್ಷದ (ಟಿಡಿಪಿ) ಸಂಸ್ಥಾಪಕ ಎನ್‍ಟಿ ರಾಮರಾವ್ ಅವರ ಮೊಮ್ಮಗ ಆಗಿರುವ ನಟ ಜೂನಿಯರ್ ಎನ್‍ಟಿಆರ್ ಅವರನ್ನು ಬಿಜೆಪಿ ನಾಯಕರು ಭಾನುವಾರ ಸಂಜೆ ಅಮಿತ್ ಶಾ ಅವರೊಂದಿಗೆ ಔತಣಕೂಟಕ್ಕೆ ಆಹ್ವಾನಿಸಿದ್ದರು. ಜೂನಿಯರ್ ಎನ್ ಟಿ ಆರ್ ಗೆ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದ್ದು ಇತ್ತೀಚೆಗಷ್ಟೇ ಜೂ.ಎನ್ ಟಿ ಆರ್ ನಟನೆಯ ಆರ್ ಆರ್ ಆರ್ ಸಿನಿಮಾ ಬಿಡುಗಡೆ ಆಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now