ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾದ ಡಾ. ರಾಜ್ ಕುಮಾರ್ ಕುಟುಂಬಸ್ಥರು
ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವರ ಸಮಾಧಿಗಳಿವೆ. ಅಲ್ಲದೆ ಡಾ.ರಾಜ್ ಕುಮಾರ್ ಪುಣ್ಯಭೂಮಿ ಟ್ರಸ್ಟ್ ಕೂಡ ಅಲ್ಲೇ ಇದೆ. ಹೀಗಾಗಿ ಆ ಜಾಗವನ್ನು ಅಭಿವೃದ್ದಿ ಪಡಿಸಲು ಡಾ.ರಾಜ್ ಕುಮಾರ್ ಕುಟುಂಬ ಯೋಜನೆಯನ್ನು ಸಿದ್ದಪಡಿಸಿದ್ದು ಈ ಬಗ್ಗೆ ಚರ್ಚಿಸಲು ಇಂದು ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದಾರೆ.
ರಾಘವೇಂದ್ರ ರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್, ಯುವ ರಾಜ್ ಕುಮಾರ್ ಸೇರಿದಂತೆ ಇನ್ನೂ ಕೆಲ ಸದಸ್ಯರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ರಾಜ್ ಕುಮಾರ್ ಕುಟುಂಬ ಸಿದ್ದಪಡಿಸಿಕೊಂಡು ಬಂದಿದ್ದ ಪಿಪಿಟಿ ವೀಕ್ಷಿಸಿದ ಸಿಎಂ PWD ಇಲಾಖೆಯಿಂದ ಯೋಜನೆ ಅಂದಾಜು ಮೊತ್ತ ತರಿಸಲು ಸೂಚನೆ ನೀಡಿದ್ದಾರೆ. PwD ಇಲಾಖೆಯಿಂದ ಯೋಜನೆಯ ರೂಪರೇಷೆ ಬಂದ ಬಳಿಕ ಮತ್ತೊಮ್ಮೆ ಮಾತುಕತೆ ನಡೆಸುವುದಾಗಿ ಸಿಎಂ ಸೂಚನೆ ನೀಡಿದ್ದಾರೆ.
