• March 15, 2026

ಡಿವೋರ್ಸ್ ಬಳಿಕ ಬದುಕು ಬದಲಾಗಿದೆ: ನಾಗಚೈತನ್ಯ

ತೆಲುಗಿನ ಸ್ಟಾರ್ ಜೋಡಿಗಳಲ್ಲಿ ನಟಿ ಸಮಂತಾ ಹಾಗೂ ನಾಗಚೈತನ್ಯ ಕೂಡ ಒಂದು. ಸಾಕಷ್ಟು ವರ್ಷಗಳ ಕಾಲ ಕೈ ಕೈ ಹಿಡಿದು ಸುತ್ತಾಡಿದ್ದ ಈ ಜೋಡಿಗಳು ಮದುವೆಯಾದ ಮೂರೇ ಮೂರು ವರ್ಷಕ್ಕೆ ದೂರವಾಗಿ ಬಿಟ್ಟಿದ್ದರು. ಸಮಂತ ಹಾಗೂ ನಾಗಚೈತನ್ಯ ಡಿವೋರ್ಸ್ ಪಡೆದು ಸಾಕಷ್ಟು ತಿಂಗಳುಗಳೇ ಕಳೆದಿದೆ. ಆದರೆ ಈ ಬಗ್ಗೆ ಈ ಜೋಡಿಗಳು ಎಲ್ಲೂ ಬಾಯಿ ಬಿಟ್ಟಿರಲಿಲ್ಲ. ಇದೀಗ ಸಮಂತಾ ವಿಚ್ಚೇಧನದ ಬಳಿಕ ಜೀವನ ಹೇಗಿದೆ ಅನ್ನೋದನ್ನ ಹೇಳಿದ್ದು, ಸಮಂತಾ ಹೇಳಿಕೆಯ ಬೆನ್ನಲ್ಲೆ ನಟ ನಾಗಚೈತನ್ಯ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ವಿಚ್ಛೇದನದ ಬಳಿಕ ತುಂಬಾ ಕಷ್ಟವಾಗಿತ್ತು. ಆದರೆ ಈಗ ಆರಾಮಾಗಿ ಇದ್ದೀನಿ. ಮೊದಲಿಗಿಂತ ಉತ್ತಮ ಹಾಗೂ ಸಾಕಷ್ಟು ಬಲಿಷ್ಟ ಆಗಿದ್ದೀನಿ ಎಂದು ಸಮಂತಾ ಹೇಳಿದ್ದಾರೆ. ನಾಗಚೈತನ್ಯ ನಟನೆಯ ಥ್ಯಾಂಕ್ಯು ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಸದ್ಯ ಈ ಸಿನಿಮಾದ ಪ್ರಚಾರದಲ್ಲಿ ತೊಡಗಿಕೊಂಡಿರುವ ನಾಗಚೈತನ್ಯ ವಿಚ್ಚೇದನದ ಬಳಿಕ ಜೀವನ ಹೇಗೆಲ್ಲಾ ಬದಲಾಗಿದೆ ಎಂದು ಹೇಳಿದ್ದಾರೆ. ಕೊರೊನಾ ಸಮಯ ಮತ್ತು ಪತ್ನಿಯೊಂದಿಗಿನ ವಿಚ್ಛೇದನವು ನನ್ನ ಜೀವನದ ಅಂತ್ಯಂತ ಕಠಿಣ ಸಮಯವಾಗಿತ್ತು ಎಂದಿದ್ದಾರೆ. ಜೊತೆಗೆ ವಿಚ್ಥೇದನ ಬಳಿಕ ಒಬ್ಬ ವ್ಯಕ್ತಿಯಾಗಿ ನಾನು ಸಾಕಷ್ಟು ಬದಲಾಗಿದ್ದೇನೆ. ಮೊದಲು ಹೆಚ್ಚು ತೆರೆದುಕೊಳ್ಳಲು ಸಾಧ್ಯವಾಗಲಿಲ್ಲ ಆದರೆ ಈಗ ಹಾಗಿಲ್ಲ. ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಹೆಚ್ಚು ಹತ್ತಿರವಾಗಿದ್ದು, ಸಂಪೂರ್ಣ ಹೊಸ ವ್ಯಕ್ತಿಯಾಗಿ ನನ್ನನ್ನು ನೋಡಿಕೊಳ್ಳಲು ಸಂತೋಷವಾಗುತ್ತದೆ ಎಂದು ನಾಗಚೈತನ್ಯ ಹೇಳಿದ್ದಾರೆ. ಸದ್ಯ ಸಮಂತ ಹಾಗೂ ನಾಗಚೈತನ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿದ್ದು ಸಾಕಷ್ಟು ಬೇಡಿಕೆ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಇತ್ತ ನಾಗಚೈತನ್ಯ ಕೂಡ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ  ಸಿನಿಮಾದಲ್ಲಿ ನಾಗಚೈತನ್ಯ ನಟಿಸಿದ್ದು ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now