• March 15, 2026

ಮಹೇಶ್ ಬಾಬು ಸಿನಿಮಾದಲ್ಲಿ ನಟಿಸಲು ಇಷ್ಟವಿರಲಿಲ್ಲ: ಶಾಕಿಂಗ್ ಹೇಳಿಕೆ ನೀಡಿದ ಪ್ರಕಾಶ್ ರಾಜ್

ದಕ್ಷಿಣ ಭಾರತದ ಖ್ಯಾತ ನಟರಲ್ಲಿ ಪ್ರಕಾಶ್ ರಾಜ್ ಕೂಡ ಒಬ್ಬರು. ತಮ್ಮ ಅದ್ಭುತ ನಟನೆಯಿಂದಲೇ ಕನ್ನಡ, ತಮಿಳು ಹಾಗೂ ತೆಲುಗು ಸಿನಿ ರಂಗದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಪ್ರಕಾಶ್ ರಾಜ್ ನೇರಾ ನೇರಾ ಮಾತುಗಳಿಂದಲೂ ಸುದ್ದಿಯಾಗ್ತಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪ್ರಕಾಶ್ ರಾಜ್ ಹೇಳಿದ ಹೇಳಿಕೆಯ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಯಾವುದೇ ಪಾತ್ರ ನೀಡಿದ್ರು ಪ್ರಕಾಶ್ ರಾಜ್ ಅದಕ್ಕೆ 100 % ನ್ಯಾಯ ಒದಗಿಸುತ್ತಾರೆ. ಖಳನಟ, ಕಾಮಿಡಿ ಪಾತ್ರ, ಸಸ್ಪೆನ್ಸ್ ಹೀಗೆ ಪ್ರತಿಯೊಂದು ಪಾತ್ರಕ್ಕೂ ಹೇಳಿ ಮಾಡಿಸಿದ ಪ್ರಕಾಶ್ ರಾಜ್ ಇತ್ತೀಚೆಗೆ ಶಾಕಿಂಗ್ ಹೇಳಿಕೆಯೊಂದನ್ನ ನೀಡಿದ್ದಾರೆ. ಇತ್ತೀಚೆಗೆ ಪ್ರಕಾಶ್ ರಾಜ್ ಸಂದರ್ಶನವೊಂದರಲ್ಲಿ ತಮಗೆ ಇಷ್ಟವಿಲ್ಲದ ಪಾತ್ರದಲ್ಲಿ ನಟಿಸಿರೋದಾಗಿ ಹೇಳಿದ್ದಾರೆ. ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ ‘ಸರಿಲೇರು ನಿಕೇವ್ವರು’ ಸಿನಿಮಾದಲ್ಲಿ ಇಷ್ಟವಿಲ್ಲದೆ ನಟಿಸಿದೆ ಎಂದಿದ್ದಾರೆ. ಅನಿಲ್ ರವಿಪುಡಿ ನಿರ್ದೇಶನದ ಮಹೇಶ್ ಬಾಬು ನಟನೆಯ ಸರಿಲೇರು ನೀಕೆವ್ವರು ಸಿನಿಮಾದಲ್ಲಿ ಪ್ರಕಾಶ್ ರಾಜ್ ಅನ್ಯಾಯದ ಕೆಲಸಗಳನ್ನು ಮಾಡುವ ರಾಜಕಾರಣಿಯಾಗಿ ಪ್ರಕಾಶ್ ರಾಜ್ ಕಾಣಿಸಿಕೊಂಡಿದ್ದಾರೆ. ಇದೇ ಪಾತ್ರ ಪ್ರಕಾಶ್ ರಾಜ್ ಗೆ ಇಷ್ಟವಿರಲಿಲ್ಲ. ಆದರೂ ಕಷ್ಟಪಟ್ಟು ನಟಿಸಿದ್ದೆ ಎಂದಿದ್ದಾರೆ. ಸಿನಿಮಾ ಒಪ್ಪಿಕೊಳ್ಳುವ ಮೊದಲು ಏನೆನೋ ಯೋಚಿಸಿ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿರುತ್ತೇನೆ. ಆದರೆ ಅದೇ ಪಾತ್ರವನ್ನು ತೆರೆ ಮೇಲೆ ನೋಡಿದಾಗ ಆ ಪಾತ್ರ ಬೇರೆಯದ್ದೇ ಆಗಿರುತ್ತೆ. ಆ ಕಾರಣಕ್ಕೆ ಸರಿಲೇರು ನೀಕೆವ್ವರು ಸಿನಿಮಾದ ಪಾತ್ರ ಇಷ್ಟವಾಗಿಲ್ಲ ಎಂದ ಪ್ರಕಾಶ್  ರಾಜ್ ಇಡೀ ವೃತ್ತಿ ಜೀವನದಲ್ಲಿ ಬೊಮ್ಮರಿಲ್ಲು ಹಾಗೂ ಆಕಾಶಮಂತ ಸಿನಿಮಾದ ಪಾತ್ರಗಳು ಸಾಕಷ್ಟು ತೃಪ್ತಿ ನೀಡಿವೆ ಎಂದರು.  

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now