ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ವಿಷ ಹಾಕಿ ಕೊಲ್ಲುವ ಪ್ರಯತ್ನ ಮಾಡಿದ್ದರು: ನಟಿ ತನುಶ್ರೀ ದತ್ತ ಶಾಕಿಂಗ್ ಹೇಳಿಕೆ
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ತನುಶ್ರೀ ದತ್ತ, ತನ್ನ ಮೇಲೆ ಹಲವು ಬಾರಿ ಕೊಲೆ ಪ್ರಯತ್ನ ಮಾಡಲಾಗಿತ್ತು ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. ತನ್ನ ಕಾರಿನ ಬ್ರೇಕ್ ಫೇಲ್ ಮಾಡಲಾಗಿತ್ತು, ಕುಡಿಯುವ ನೀರಿಗೆ ವಿಷ ಹಾಕಲಾಗಿತ್ತು ಎಂದಿದ್ದಾರೆ.
‘ಒಂದೆರಡು ಬಾರಿ ನನ್ನ ಕಾರಿನ ಬ್ರೇಕ್ ಫೇಲ್ ಮಾಡಿಸಿದರು. ಅದರಿಂದ ನನಗೆ ಒಮ್ಮೆ ಅಪಘಾತವಾಯಿತು. ನನ್ನ ಮೂಳೆ ಮುರಿಯಿತು. ಇದರಿಂದ ಚೇತರಿಸಿಕೊಳ್ಳಲು ನನಗೆ ಹಲವು ತಿಂಗಳುಗಳೇ ಬೇಕಾದವು. ನಮ್ಮ ಮನೆಯಲ್ಲಿ ಓರ್ವ ಕೆಲಸದವಳು ಇದ್ದಳು. ಆಕೆಯನ್ನು ಯಾರೋ ನಮ್ಮ ಮನೆಗೆ ಬೇಕಂತಲೇ ಕಳಿಸಿದ್ದರು ಎನಿಸುತ್ತದೆ. ಕುಡಿಯುವ ನೀರಿನಲ್ಲಿ ಆಕೆ ಏನೋ ಬೆರೆಸುತ್ತಿದ್ದಳು ಎಂಬುದು ನನ್ನ ಅನುಮಾನ. ಯಾಕೆಂದರೆ ನನ್ನ ಆರೋಗ್ಯ ಹದಗೆಟ್ಟಿತು’ ಎಂದು ತನುಶ್ರೀ ದತ್ತಾ ಆರೋಪ ಮಾಡಿದ್ದಾರೆ.
