• January 1, 2026

ಅನಾರೋಗ್ಯದ ಸುದ್ದಿ ಬೆನ್ನಲ್ಲೆ ಸಮಂತಾರನ್ನು ಭೇಟಿ ಮಾಡಲಿದ್ದಾರೆ ನಾಗಚೈತನ್ಯ

ಟಾಲಿವುಡ್ ನಟಿ ಸಮಂತಾ `ಮೈಯೋಸಿಟಿಸ್’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಇತ್ತೀಚೆಗಷ್ಟೇ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಈ ಸುದ್ದಿಯ ಬೆನ್ನಲ್ಲೆ ಸಮಂತಾ ಕುರಿತ ಮತ್ತೊಂದು ಸುದ್ದಿಯೊಂದು ಹರಿದಾಡುತ್ತಿದೆ. ಸಮಂತಾಗೆ ಅನಾರೋಗ್ಯದಿಂದಾಗಿ ಸಾಕಷ್ಟು ನೋವಿ ಅನುಭವಿಸಿದ್ದಾರೆ. ಆರೋಗ್ಯ ಕೈಕೊಟ್ಟ ಬೆನ್ನಲ್ಲೇ ಮಾಜಿ ಪತ್ನಿ ಸಮಂತಾರನ್ನು ನಾಗಚೈತನ್ಯ ಭೇಟಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸಮಂತಾ `ಮೈಯೋಸಿಟಿಸ್’ ಕಾಯಿಲೆಯಿಂದ ಬಳುತ್ತಿರುವುದು ಹೇಳಿಕೊಂಡಿದ್ದು ಆದಷ್ಟು ಬೇಗ ಅದರಿಂದ ಆಚೆ ಬರುವುದಾಗಿ ಹೇಳಿದ್ದಾರೆ,. ಸಮಂತಾರಾ ಆರೋಗ್ಯದ ಸುದ್ದಿ ತಿಳಿದ ಸಾಕಷ್ಟು ಮಂದಿ ಆದಷ್ಟು ಬೇಗ ಚೇತರಿಸಿಕೊಳ್ಳಿ ಎಂದಿದ್ದಾರೆ. ಅಲ್ಲದೆ ಸಾಕಷ್ಟು ಸ್ಟಾರ್ ನಟ ನಟಿಯರು ಸಮಂತಾ ಬೇಗ ಗುಣಮುಖರಾಗಿ ಎಂದು ಹಾರೈಸಿದ್ದರು. ಅಕ್ಕಿನೇನಿ ಕುಟುಂಬದಿಂದ ಅಖಿಲ್ ಕೂಡ ಸಮಂತಾಗೆ ಬೇಗ ಚೇತರಿಕೊಳ್ಳಿ ಎಂದು ಹೇಳಿ ಪೋಸ್ಟ್ ಮಾಡಿದ್ದರು. ಆದರೆ ಸಮಂತಾ ಅಆರೋಗ್ಯದ ವಿಷಯದ ಕುರಿತಾಗಿ ನಾಗಚೈತನ್ಯ ಯಾವುದೇ ಪೋಸ್ಟ್ ಮಾಡಿಲ್ಲ. ಆದರೆ ಇದೀಗ ಮತ್ತೊಂದು ಹೊಸ ಸುದ್ದಿ ಹರಿದಾಡುತ್ತಿದ್ದು. ಸಮಂತಾ ಆರೋಗ್ಯದಲ್ಲಿ ಚೇತರಿಕೆ ಕಂಡ ಬಳಿಕ ನಾಗಚೈತನ್ಯ, ಸಮಂತಾರನ್ನ ಭೇಟಿಯಾಗಲಿದ್ದಾರೆ ಎನ್ನಲಾಗುತ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now