ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಯಾವುದೇ ಕಾರಣಕ್ಕೂ ಚಿತ್ರದ ದೃಶ್ಯಗಳನ್ನು ತೆಗೆದು ಹಾಕಲ್ಲ: ಹೆಡ್ ಬುಷ್ ಚಿತ್ರತಂಡ
ಈ ಬಗ್ಗೆ ಪ್ರತಿಕ್ರಿಯಿಸಿದ ಹೆಡ್ ಬುಷ್ ಚಿತ್ರತಂಡ, ವೀರಗಾಸೆಗೆ ನಾವು ಅವಮಾನ ಮಾಡಿಲ್ಲದಿದ್ದರೂ ಕ್ಷಮೆ ಕೇಳಿದ್ದೇವೆ. ಆದರೂ ವಿವಾದದ ಕಾವು ಕಡಿಮೆ ಆಗುತ್ತಿಲ್ಲ. ಸಿನಿಮಾದಿಂದ ದೃಶ್ಯವನ್ನೇ ಕತ್ತರಿಸುವಂತೆ ಒತ್ತಡ ಹೇರಲಾಗುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಆ ದೃಶ್ಯವನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಚಿತ್ರವನ್ನು ವಿರೋಧಿಸುವವರಿಗಿಂತಲೂ ಅದನ್ನು ಮೆಚ್ಚಿಕೊಂಡವರ ಸಂಖ್ಯೆ ದೊಡ್ಡದಿದೆ ಎನ್ನುವ ಕಾರಣಕ್ಕಾಗಿ ಚಿತ್ರತಂಡ ಈ ನಿರ್ಧಾರಕ್ಕೆ ಬಂದಿದೆ ಎಂಬ ಮಾತು ಚಿತ್ರತಂಡದ ಕಡೆಯಿಂದ ಬಂದಿದೆ.
ಚಿತ್ರದಲ್ಲಿ ವೀರಗಾಸೆ ಹಾಗೂ ಕರಗಕ್ಕೆ ಅವಮಾನ ಮಾಡಲಾಗಿದೆ. ಈ ಮೂಲಕ ಹಿಂದೂ ಧರ್ಮಕ್ಕೆ ಅವಮಾನ ಆಗಿದೆ ಎಂದು ಸಾಕಷ್ಟು ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ಅಲ್ಲದೆ ತಿಪಟೂರಿನ ಲಕ್ಷ್ಮೀ ಚಿತ್ರಮಂದಿರದ ಆವರಣದಲ್ಲಿ ಭಜರಂಗ ದಳದ ಕಾರ್ಯಕರ್ತರು ಧನಂಜಯ್ ಫೋಟೋಗೆ ಚಪ್ಪಲಿ ಹಾರ ಹಾಕಿ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸದ್ದಾರೆ.
