• January 1, 2026

ಗೀತಾ ನನ್ನ ಜೀವನಕ್ಕೆ ಸಿಕ್ಕ ದೊಡ್ಡ ವರ: ಶಿವರಾಜ್ ಕುಮಾರ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಸ್ಯಾಂಡಲ್ ವುಡ್ ನ ಬೆಸ್ಟ್ ಕಪಲ್ ಗಳಲ್ಲಿ ಒಂದು. ಸದಾ ಶಿವಣ್ಣನಿಗೆ ಬೆನ್ನೆಲುಭಾಗಿ ನಿಂತಿದ್ದಾರೆ. ಇದೀಗ ಪತ್ನಿ ನನ್ನ ಜೀವನದ ದೊಡ್ಡ ಶಕ್ತಿ ಎಂದು ಶಿವಣ್ಣ ಹೇಳಿದ್ದಾರೆ. ಶಿವರಾಜ್ ಕುಮಾರ್ ಝೀ ಕನ್ನಡದಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ತೀರ್ಪುಗಾರರಾಗಿದ್ದರು. ಇತ್ತೀಚೆಗೆ ಝೀ ಕನ್ನಡದಲ್ಲಿ ನಡೆದ ಝೀ ಕುಟುಂಬ ಅವಾರ್ಡ್ ನಲ್ಲಿ ಶಿವರಾಜ್ ಕುಮಾರ್ ಅವರಿಗೆ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ನೀಡ ಗೌರವಿಸಲಾಯಿತು. ಶಿವರಾಜ್ ಕುಮಾರ್ ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಪ್ರಶಸ್ತಿ ನೀಡಿದರ. ಈ ವೇಳೆ ಮಾತನಾಡಿದ ರವಿಚಂದ್ರನ್ ನಾನು ಹಾಗೂ ಶಿವರಾಜ್ ಕುಮಾರ್ ಮೊದಲಿನಿಂದಲೂ ಒಳ್ಳೆಯ ಸ್ನೇಹಿತರು. ನಮ್ಮ ಸ್ನೇಹ ನಮ್ಮ ಮನಸಲ್ಲಿ ಇತ್ತು. ಈಗ ಝೀ ಕನ್ನಡ ವಾಹಿನಿಯವರು ಆಚೆ ತಂದರು ಎಂದರು. ಇನ್ನೂ ಪ್ರಶಸ್ತಿ ಸ್ವೀಕರಿಸಿದ ಬಳಿಕ ರವಿಚಂದ್ರನ್ ಪ್ರಶ್ನೆಗೆ ಉತ್ತರಿಸಿದ ಶಿವರಾಜ್ ಕುಮಾರ್ ಪತ್ನಿ ಗೀತಾ ಬಗ್ಗೆ ಮಾತನಾಡಿದ್ದಾರೆ. ನನಗೆ ಬ್ರೈನ್‍ನಲ್ಲಿ ಸಣ್ಣ ಸಮಸ್ಯೆ ಆಗಿತ್ತು. 10 ವರ್ಷಗಳ ಹಿಂದೆ ಆಪರೇಷನ್ ಮಾಡಿಸಿಕೊಳ್ಳಲು ಪ್ಯಾರಿಸ್‍ಗೆ ಹೋಗಿದೆ. ನನ್ನ ಇಬ್ಬರು ತಮ್ಮಂದಿರಿಗೂ ವೀಸ ಸಿಗಲಿಲ್ಲ. ರಿಸ್ಕ್ ಫ್ಯಾಕ್ಟರ್ ಜಾಸ್ತಿ ಇತ್ತು ನನಗೆ ಆತಂಕ ಹೆಚ್ಚಿತ್ತು. ಆ ಸಮಯದಲ್ಲಿ ಗೀತ ನನ್ನ ಜೊತೆ ನಿಂತಿದ್ದರು. ನನ್ನ ಆರೋಗ್ಯ ಸರಿ ಆದರೆ ಕೂದಲು ಕೊಡುವುದಾಗಿ ಹೇಳಿದ್ದರು. ಹೆಣ್ಣು ಮಕ್ಕಳು ಕೂದಲನ್ನು ತುಂಬಾ ಇಷ್ಟ ಪಡುತ್ತಾರೆ ಈ ರೀತಿ ಕೊಡಲು ಇಷ್ಟ ಪಡುವುದಿಲ್ಲ. ಆ ಕ್ಷಣ ನಾನು ಜೀವನದಲ್ಲಿ ಮರೆಯುವುದಿಲ್ಲ. ಆಗ ಗೊತ್ತಾಯಿತು ಹೆಂಡತಿ ಬೆಲೆ ಏನೂ ಎಂದು ಶಿವಣ್ಣ ಹೇಳಿದ್ದಾರೆ.  

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now