• January 2, 2026

ನಟ ಕಂ ನಿರ್ಮಾಪಕನ ಜೊತೆ ರಾಕುಲ್ ಪ್ರೀತ್ ಸಿಂಗ್ ಮದುವೆ

ಕನ್ನಡದ ಗಿಲ್ಲಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟು ಪರಭಾಷೆಯಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ನಟಿ ರಾಕುಲ್ ಪ್ರೀತ್ ಸಿಂಗ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ರಾಕುಲ್ ಪ್ರೀತ್ ಸಿಂಗ್ ಹಾಗೂ ಬಾಲಿವುಡ್ ನಟ ಕಂ ನಿರ್ಮಾಪಕ ಜಕ್ಕಿ ಬಗ್ ನಾನಿ ಮದುವೆಯ ವಿಚಾರ ಸಾಕಷ್ಟು ಭಾರಿ ಸುದ್ದಿಯಾಗಿದೆ. ಇದೀಗ ಈ ಜೋಡಿಯ ಮದುವೆಯ ಕುರಿತು ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಜಕ್ಕಿ ಹಾಗೂ ರಾಕುಲ್ ಪ್ರೀತ್ ಡೇಟಿಂಗ್ ಮಾಡ್ತಿರೋ ವಿಚಾರ ಗುಟ್ಟಾಗಿ ಏನು ಉಳಿದಿಲ್ಲ. ಹೋದಲ್ಲಿ ಬಂದಲ್ಲೆಲ್ಲಾ ಸದಾ ಅಂಟಿಕೊಂಡೇ ಓಡಾಡುತ್ತಿದ್ದ ಜೋಡಿ ಯಾವಾಗ ಮದುವೆ ಆಗ್ತಾರೆ ಎಂಬ ಸುದ್ದಿ ಆಗಾಗ ಕೇಳಿ ಬರುತ್ತಲೆ ಇತ್ತು. ಇದೀಗ ಈ ಬಗ್ಗೆ ರಾಕುಲ್ ಸಹೋದರ ಮಾಹಿತಿ ನೀಡಿದ್ದಾರೆ. ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಮಾತನಾಡಿದ ರಾಕುಲ್ ಸಹೋದರ ಅಮನ್ ಸಿಂಗ್, ಜಕ್ಕಿ ಬಗ್ ನಾನಿ ಜೊತೆ ರಾಕುಲ್ ಮದುವೆ ಆಗುತ್ತಿರುವುದಾಗಿ ಹೇಳಿದ್ದಾರೆ. ಶೀಘ್ರದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದು, ಮದುವೆ ದಿನಾಂಕ ಮತ್ತು ಜಾಗವನ್ನು ಅಂತಿಮಗೊಳಿಸುವುದಷ್ಟೇ ಬಾಕಿ ಎಂದಿದ್ದಾರೆ. ಇದೇ ವಿಚಾರವನ್ನು ಜಕ್ಕಿ ತಂದೆ ವಾಸು ಕೂಡ ಖಚಿತ ಪಡಿಸಿದ್ದು,  ಶೀಘ್ರದಲ್ಲೇ ಮದುವೆ ಮಾಹಿತಿ ಆಗುವುದಾಗಿ ತಿಳಿಸಿದ್ದಾರೆ. 2009ರಲ್ಲಿ ತೆರೆಕಂಡ ಕಲ್ ಕಿಸ್ನೇ ದೇಖಾ ಸಿನಿಮಾದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಜಕ್ಕಿ ಆಗಾಗ ಅಲ್ಲಿ ಇಲ್ಲಿ ಒಂದೊಂದು ಸಿನಿಮಾಲದಲ್ಲಿ ಕಾಣಿಸಿಕೊಂಡಿದ್ದಾರೆ. 2018ರಲ್ಲಿ ತೆರೆಕಂಡ ಮೋಹಿನಿ ಸಿನಿಮಾದ ಬಳಿಕ ನಟನೆಯಿಂದ ದೂರ ಉಳಿದ ಜಕ್ಕಿ ನಿರ್ಮಾಪಕರಾಗಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಇದೀಗ ಈ ಜೋಡಿಗಳು ಹಸೆಮಣೆ ಏರೋಕೆ ರೆಡಿಯಾಗಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now