• January 2, 2026

ವಿಜಯ್ ದೇವರಕೊಂಡ ಶರ್ಟ್ ತೊಟ್ಟು ಕ್ಯಾಮೆರಾಗೆ ಫೋಸ್ ಕೊಟ್ರಾ ರಶ್ಮಿಕಾ?

ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಕಳೆದ ಕೆಲ ದಿನಗಳಿಂದ ಸಖತ್ ಸುದ್ದಿಯಾಗ್ತಿದ್ದಾರೆ. ಈ ಮೊದಲು ಡೇಟಿಂಗ್ ನಲ್ಲಿದ್ದ ಜೋಡಿಗಳು ಬಳಿಕ ದೂರ ದೂರವಾಗಿದ್ದರು. ಇದೀಗ ಮತ್ತೆ ಒಂದಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು ಇಬ್ಬರು ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಿನಿಮ ಜರ್ನಿ ಆರಂಭಿಸಿದ ರಶ್ಮಿಕಾ ಮಂದಣ್ಣ ಇದೀಗ ಬಹುಭಾಷಾ ನಟಿಯಾಗಿ ಖ್ಯಾತಿ ಘಳಿಸಿದ್ದಾರೆ. ಈಗಾಗ್ಲೆ ಬಾಲಿವುಡ್ ಗೆ ಎಂಟ್ರಿಕೊಟ್ಟಿರುವ ರಶ್ಮಿಕಾ ಮಂದಣ್ಣ ನಟನೆಯ ಮೊದಲ ಸಿನಿಮಾ ಗುಡ್ ಬೈ ತೆರೆಗೆ ಬಂದಿದೆ. ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ಗುಡ್ ಬೈ ಸಿನಿಮಾದಲ್ಲಿ ರಶ್ಮಿಕಾ ನಟಿಸಿದ್ದು ಸಿನಿಮಾ ರಿಲೀಸ್ ಆದ ದಿನವೇ ರಶ್ಮಿಕಾ ಮಾಲ್ಡೀವ್ಸ್ ಗೆ ಹಾರಿದ್ದಾರೆ. ಗುಡ್ ಬೈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ರಶ್ಮಿಕಾ ಮಾಲ್ಡೀವ್ಸ್ ನಲ್ಲಿ ಮಸ್ತ್ ಮಜಾ ಮಾಡ್ತಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಕೆಲವೇ ಕೆಲವು ಸೆಕೆಂಡ್ ಗಳ ಅಂತರದಲ್ಲಿ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ ಜೋಡಿಗಳು ಮಾಲ್ಡೀವ್ಸ್ ಗೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಮಾಲ್ಡೀವ್ಸ್ ನಿಂದ ರಶ್ಮಿಕಾ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದು ಅಭಿಮಾನಿಗಳು ವಿಜಯ್ ದೇವರಕೊಂಡ ಜೊತೆಗಿದ್ದಾರಾ ಎಂದು ಪ್ರಶ್ನಿಸುತ್ತಿದ್ದಾರೆ. ಮಾಲ್ಡೀವ್ಸ್ ಪ್ರವಾಸದಲ್ಲಿರುವ ರಶ್ಮಿಕಾ ಮಂದಣ್ಣ ನೀಲಿ ನೀರಿನ ಮುಂದೆ ಕುಳಿತು ಕ್ಯಾಮೆರಾಗೆ ಫೋಸ್ ನೀಡಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ಮಾಲ್ಡೀವ್ಸ್ ನಿಂದ ಶೇರ್ ಮಾಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸ್ವಿಮ್ ಸೂಟ್ ಧರಿಸಿರುವ ರಶ್ಮಿಕಾ ಮೇಲೆ ಉದ್ದವಾದ ಶರ್ಟ್ ಹಾಕಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್ ವಿಜಯ್ ದೇವರಕೊಂಡ ಶರ್ಟ್ ಇದು ಎಂದು ಕಾಲೆಳೆಯುತ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now