ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮಾಲ್ಡೀವ್ಸ್ ಗೆ ಹಾರಿದ ರಶ್ಮಿಕಾ, ವಿಜಯ್ ದೇವರಕೊಂಡ: ಮತ್ತೆ ಡೇಟಿಂಗ್ ನಲ್ಲಿದ್ದಾರಾ ಸ್ಟಾರ್ ಜೋಡಿ
ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿಯಾಗಿ ಗೀತಾ ಗೋವಿಂದಂ ಹಾಗೂ ಡಿಯರ್ ಕಾಮ್ರೇಡ್ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆ ಬಳಿಕ ಇಬ್ಬರ ನಡುವೆ ಡೇಟಿಂಗ್ ನಡೆಯುತ್ತಿದೆ ಎನ್ನಲಾಗಿತ್ತು. ಆದರೆ ಈ ಜೋಡಿಗಳು ಮಾತ್ರ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದುಕೊಂಡೇ ಬಂದಿದ್ದರು. ಆದರೆ ರಜಾ ದಿನಗಳನ್ನು ಕಳೆಯಲು ಇಬ್ಬರೂ ಒಂದೇ ಸ್ಥಳಕ್ಕೆ ಒಟ್ಟಿಗೆ ಹೋಗುತ್ತಿರುವುದು ಗಾಳಿಸುದ್ದಿಗೆ ಪುಷ್ಠಿ ನೀಡುವಂತಿದೆ.
ಇಷ್ಟು ದಿನ ಬಾಲಿವುಡ್ನ ಚೊಚ್ಚಲ ಚಿತ್ರ ಗುಡ್ ಬೈ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದ ರಶ್ಮಿಕಾ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ವೆಕೇಶನ್ ಕಳೆಯಲು ವಿಜಯ್ ದೇವರಕೊಂಡ ಜೊತೆ ಮಾಲ್ಡೀವ್ಸ್‌ಗೆ ಪ್ರಯಾಣ ಬೆಳೆಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇಬ್ಬರು ಒಟ್ಟಾಗಿ ಹೋಗುತ್ತಿರುವುದ ಕ್ಯಾಮೆರಾ ಕಣ್ಣೀಗೆ ಕಾಣಿಸಿಕೊಂಡಿದೆ.
