• January 2, 2026

ಆ ಘಟನೆಯಿಂದ ನೊಂದು ಒಬ್ಬಳ್ಳೆ ಕೂತು ಕಣ್ಣೀರು ಹಾಕಿದ್ದೆ: ನಟಿ ರಶ್ಮಿಕಾ ಮಂದಣ್ಣ

ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಸಿನಿಮಾಗಳ ಜೊತೆಗೆ ವಿಜಯ್ ದೇವರಕೊಂಡ ಜೊತೆಗಿನ ಡೇಟಿಂಗ್ ಕುರಿತಾಗಿಯೂ ಸಖತ್ ಸುದ್ದಿಯಾಗಿದ್ದರು. ಹೋದಲ್ಲಿ ಬಂದಲ್ಲೆಲ್ಲಾ ಕೈ ಕೈ ಹಿಡಿದು ಸುತ್ತಾಡುತ್ತಿದ್ದ ಜೋಡಿಗಳು ಅಷ್ಟೇ ಬೇಗ ದೂರ ದೂರವಾಗಿದ್ದರು. ಈ ಹಿಂದೆ ವಿಜಯ್ ದೇವರಕೊಂಡ ಜೊತೆ ಲಿಪ್ ಲಾಕ್ ಮಾಡಿದ ಕಾರಣಕ್ಕೆ ಸಖತ್ ಟ್ರೋಲ್ ಗೆ ಗುರಿಯಾಗಿದ್ದ ರಶ್ಮಿಕಾ ಮಂದಣ್ಣ ಇದೀಗ ಘಟನೆಯ ಕುರಿತು ಮಾತನಾಡಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿಸಿದ್ದ ರಶ್ಮಿಕಾ ಮಂದಣ್ಣಗೆ ತೆಲುಗಿನಲ್ಲಿ ಗೀತಾ ಗೋವಿಂದ ಹಾಗೂ ಡಿಯರ್ ಕಾಮ್ರೇಡ್ ಸಿನಿಮಾಗಳು ಸಾಕಷ್ಟು ಖ್ಯಾತಿ ತಂದು ಕೊಟ್ಟವು. ತೆಲುಗು ಇಂಡಸ್ಟ್ರಿಗೆ ಎಂಟ್ರಿಕೊಟ್ಟ ಆರಂಭದಲ್ಲಿಯೇ ಡಿಯರ್ ಕಾಮ್ರೇಡ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆ ಲಿಪ್ ಲಾಕ್ ಮಾಡಿ ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದರು. ಇದೀಗ ಘಟನೆಯ ಕುರಿತು ರಶ್ಮಿಕಾ ಮಾತನಾಡಿದ್ದಾರೆ. ಅದು ಒಂದು ಸೆಕೆಂಡ್‌ನಲ್ಲಿ ನಡೆದಿತ್ತು. ಆದರೆ ಆ ದೃಶ್ಯ ಇಟ್ಟುಕೊಂಡು ತಿಂಗಳುಗಟ್ಟಲೇ ನನ್ನನ್ನು ಟ್ರೋಲ್ ಮಾಡಿದರು. ಆ ಘಟನೆಯಿಂದ ನಾನು ಸಾಕಷ್ಟು ನೊಂದಿದ್ದೆ. ಅಂದು ಎಲ್ಲರೂ ನನ್ನನ್ನು ಬಿಟ್ಟು ಹೋದಂತೆ, ನಾನು ಒಂಟಿ ಆದಂತೆ ಕನಸು ಬೀಳುತ್ತಿತ್ತು. ಆ ವೇಳೆ ಅದೆಷ್ಟೋ ದಿನಗಳ ಕಾಲ ರೂಮ್ ನಲ್ಲಿ ಒಬ್ಬಳೇ ಕೂತು ಅಳುತ್ತಿದ್ದೆ ಎಂದು ರಶ್ಮಿಕಾ ಮಂದಣ್ಣ ತಮಗಾದ ಕಹಿ ಅನುಭವವನ್ನ ಹಂಚಿಕೊಂಡಿದ್ದಾರೆ. ಈ ಜೋಡಿಯನ್ನು ಮತ್ತೆ ತೆರೆ ಮೇಲೆ ನೋಡ್ಬೇಕು ಎಂದು ಅಭಿಮಾನಿಗಳು ಕಾದು ಕೂತಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ರಶ್ಮಿಕಾ ಮಂದಣ್ಣ ನಾನು ಹಾಗೂ ವಿಜಯ್ ದೇವರಕೊಂಡ ಉತ್ತಮ ಸ್ನೇಹಿತರು. ಆತನೊಂದಿಗೆ ಸಿನಿಮಾ ಮಾಡುವುದಾಗಿ ರಶ್ಮಿಕಾ ಹೇಳಿಕೊಂಡಿದ್ದಾರೆ.  

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now