• June 20, 2026

ಸಾವು ಗೆದ್ದು ಬಂದ ರೋಚಕ ಮಾಹಿತಿ ಬಿಚ್ಚಿಟ್ಟ ಸಾರಾ, ಜಾಹ್ನವಿ

ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಸದ್ದು ಮಾಡುತ್ತಿರುವ ನಟಿ ಸಾರಾ ಅಲಿ ಖಾನ್ ಹಾಗೂ ಜಾಹ್ನವಿ ಕಪೂರ್ ಉತ್ತಮ ಸ್ನೇಹಿತರು ಅನ್ನೋದು ಗೊತ್ತೆ ಇದೆ. ಆಗಾಗ ಇಬ್ಬರು ಪ್ರವಾಸಕ್ಕೆ ಹೋಗ್ತಾ ಇರ್ತಾರೆ. ಇದೀಗ ಜಾಹ್ನವಿ ಹಾಗೂ ಸಾರಾ ಪ್ರವಾಸಕ್ಕೆ ಹೋಗಿದ್ದ ವೇಳೆ ಸಾವಿನ ದವಡೆಯಿಂದ ಪರಾಗಿ ಬಂದಿರುವ ರೋಚಕ ಸ್ಟೋರಿಯನ್ನು ಇವರು ಹಂಚಿಕೊಂಡಿದ್ದಾರೆ. ನಟ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದ ಸಾರಾ ಹಾಗೂ ಜಾಹ್ನವಿ ಪ್ರವಾಸದ ಅನುಭವವನ್ನು ಹಂಚಿಕೊಂಡಿದ್ದಾರೆ. ಕೇದರನಾಥಗೆ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ಸಾವಿನ ಅಂಚಿನಿಂದ ಪರಾಗಿ ಬಂದ ಕುರಿತು ಸ್ನೇಹಿತೆಯರು ಹೇಳಿಕೊಂಡಿದ್ದಾರೆ. ಕೇದರನಾಥ್‌ಗೆ ಭೇಟಿ ನೀಡಿದ್ದ ವೇಳೆ ಅಲ್ಲಿಂದ ಬೈರವನಾಥ್ ಪಾದಾಯಾತ್ರೆ ಮಾಡಲು ನಿರ್ಧರಿಸಿದ್ದೆವು. ನೋಡಲು ಸುಲಭದಂತೆ ತೋರಿತು. ಇಬ್ಬರೇ ಕಾಲ್ನಡಿಯಲ್ಲಿ ಹೋಗುವುದೆಂದು ನಿರ್ಧರಿಸಿ ಪಾದಾಯಾತ್ರೆ ಶುರು ಮಾಡಿದೆವು. ಸ್ವಲ್ಪ ದೂರ ಹೋಗುತ್ತಿದ್ದಂತೆ ಅಲುಗಾಡುತ್ತಿದ್ದ ಬಂಡೆಯ ಮೇಲೆ ನಿಂತಿದ್ದ ನಮಗೆ ನಾವು ಅಪಾಯದಲ್ಲಿದ್ದೇವೆ ಎಂದು ತಿಳಿಯಿತು. ನಮ್ಮ ನೋಡಿದ ಡ್ರೈವರ್ ತಕ್ಷಣವೇ ಸ್ಪೆಷಲ್ ಫೋರ್ಸ್ ಸಹಾಯದಿಂದ ನಮ್ಮನ್ನು ರಕ್ಷಣೆ ಮಾಡಿದರು ಎಂದು ಸಾರಾ ಅಲಿಖಾನ್ ತಾವು ಅಪಾಯದಿಂದ ಬಂದ ಮಾಹಿತಿಯನ್ನು ಬಿಚ್ಚಿಟ್ಟರು. ಸದ್ಯ ಸಾರಾ ಅಲಿ ಖಾನ್ ವಿಕ್ಕಿ ಕೌಶಲ್ ನಟನೆಯ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಇದರ ಜೊತೆಗೆ ಗ್ಯಾಸ್ ಲೈಟ್ ಸಿನಿಮಾದಲ್ಲೂ ಸಾರಾ ನಟಿಸುತ್ತಿದ್ದಾರೆ. ಜೊತೆಗೆ ನಟಿ ಜಾಹ್ನವಿ ಕಪೂರ್ ಕೂಡ ರಾಜ್ ಕುಮಾರ್ ರಾವ್ ನಟನೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now