ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕೊನೆಗೂ ಈಡೇರಿತು ಅಭಿಮಾನಿಗಳ ಆಸೆ: ಅರ್ಜುನ್ ಜನ್ಯ ಚಿತ್ರದಲ್ಲಿ ಶಿವಣ್ಣ, ಉಪ್ಪಿ ನಟನೆ
ಸಾಕಷ್ಟು ವರ್ಷಗಳ ಬಳಿಕ ಉಪೇಂದ್ರ ಹಾಗೂ ಶಿವಣ್ಣ ಒಟ್ಟಿಗೆ ಸಿನಿಮಾ ಮಾಡ್ತಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ, ಅರ್ಜುನ್ ಜನ್ಯ ಮೊಟ್ಟ ಮೊದಲ ಭಾರಿಗೆ ನಿರ್ದೇಶನದ ಮಾಡುತ್ತಿರುವ ಸಿನಿಮಾದಲ್ಲಿ ಉಪೇಂದ್ರ ಹಾಗೂ ಶಿವರಾಜ್ ಕುಮಾರ್ ಕಾಣಿಸಿಕೊಳ್ತಿದ್ದಾರೆ. ಈಗಾಗ್ಲೆ ಶಿವಣ್ಣ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದು ಇದೀಗ ಉಪೇಂದ್ರ ಎಂಟ್ರಿಕೊಟ್ಟಿದ್ದಾರೆ.
ಚಿತ್ರಕ್ಕೆ 45 ಎಂದು ಟೈಟಲ್ ಇಡಲಾಗಿದ್ದು ಇದೇ ಡಿಸೆಂಬರ್ ನಿಂದ ಚಿತ್ರೀಕರಣ ಶುರುವಾಗಲಿದೆ. ಸದ್ಯ ಶಿವಣ್ಣ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಉಪೇಂದ್ರ ಕೈಯಲ್ಲೂ ಆರೇಳು ಸಿನಿಮಾಗಳಿದ್ದು ಈ ಸಿನಿಮಾಗಳು ಕಂಪ್ಲೀಟ್ ಆದ ಬಳಿಕ ಇಬ್ಬರು ಅರ್ಜುನ್ ಜನ್ಯ ಸಿನಿಮಾದಲ್ಲಿ ನಟಿಸಲಿದ್ದಾರೆ. 45 ಸಿನಿಮಾ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು ಅಭಿಮಾನಿಗಳು ಈಗಿನಿಂದಲೇ ಕಾತರದಿಂದ ಕಾಯುವಂತೆ ಮಾಡಿದೆ.
