ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಜಮೀರ್ ಪುತ್ರ ಝೈದ್ ಖಾನ್ ನಟನೆಯ ಬನಾರಸ್ ಬಿಡುಗಡೆಗೆ ಸಿದ್ದ
ಸಾಮಾನ್ಯವಾಗಿ ಸಿನಿಮಾದಲ್ಲಿ ಹಾಡುಗಳು ಹಿಟ್ ಆದ್ರೆ ಸಿನಿಮಾ ಆಲ್ ಮೋಸ್ಟ್ ಗೆದ್ದ ಲೆಕ್ಕವೇ. ಅಂತೆಯೇ ಬನಾರಸ್ ಸಿನಿಮಾದ ಮಾಯಗಂಗೆ ಎಂಬ ಮೋಹಕ ಹಾಡು ಸೂಪರ್ ಹಿಟ್ ಆಗಿದ್ದು ಕೇಳುಗರ ಮನ ತಣಿಸಿದೆ. ಸಾಕಷ್ಟು ನಿರೀಕ್ಷೆಗಳೊಂದಿಗೆ ತೆರೆಗೆ ಬರುತ್ತಿರುವ ಬನಾರಸ್ ಸಿನಿಮಾ ಕನ್ನಡದ ಸೇರಿದಂತೆ ಐದು ಭಾಷೆಯಲ್ಲಿ ಏಕಕಾಲದಲ್ಲಿ ತೆರೆಗೆ ಬರಲಿದೆ.
ಸಾಕಷ್ಟು ಅದ್ದೂರಿಯಾಗಿ ಮೂಡಿ ಬಂದಿರುವ ಬನಾರಸ್ ಸಿನಿಮಾವನ್ನು ತಿಲಕ್ ರಾಜ್ ಬಲ್ಲಾಳ್ ನಿರ್ಮಾಣ ಮಾಡಿದ್ದಾರೆ. ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಎದುರು ಬರಲು ಬನಾರಸ್ ಭರ್ಜರಿ ತಯಾರಿ ಮಾಡಿಕೊಂಡಿದ್ದು ಈ ಮೂಲಕ ಹೊಸ ನಟನ ಎಂಟ್ರಿ ಸ್ಯಾಂಡಲ್ ವುಡ್ ಗೆ ಆಗುತ್ತಿದೆ.
