ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಝೈದ್ ಖಾನ್ ಸಿನಿಮಾದ ಮೇಲೆ ಹೆಚ್ಚಾಯ್ತು ನಿರೀಕ್ಷೆ: 4 ಮಿಲಿಯನ್ ವೀವ್ಸ್ ಪಡೆದ ‘ಬನಾರಸ್’ ಟ್ರೈಲರ್
ರಾಜಕೀಯ ಕುಟುಂಬದಿಂದ ಬಂದ ಝೈದ್ ಖಾನ್ ಬಣ್ಣದ ಬದುಕನ್ನು ಆಯ್ಕೆ ಮಾಡಿಕೊಂಡಿದ್ದು ಇಲ್ಲಿಯೇ ನೆಲೆ ನಿಲ್ಲುವ ಸೂಚನೆ ನೀಡಿದ್ದಾರೆ. ಮೊದಲ ಸಿನಿಮಾದ ಟ್ರೈಲರ್ ನಲ್ಲೇ ಪ್ರೇಕ್ಷಕರ ಮನಸ್ಸು ಗೆದ್ದಿರೋ ಝೈದ್ ಖಾನ್ ಮೇಲೆ ಗಾಂಧಿನಗರದಲ್ಲಿ ಮತ್ತಷ್ಟು ನಿರೀಕ್ಷೆ ಮೂಡಿದೆ. ಝೈದ್ ಗೆ ಜೋಡಿಯಾಗಿ ನಟಿ ಸೋನಲ್ ಮಾಂಥೆರೋ ಕಾಣಿಸಿಕೊಂಡಿದ್ದು ಇಬ್ಬರ ಕೆಮಿಸ್ಟ್ರಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಟೈಮ್ ಟ್ರಾವೆಲಿಂಗ್ ಪರಿಕಲ್ಪನೆ ಅಡಿಯಲ್ಲಿ ‘ಬನಾರಸ್’ ಸಿನಿಮಾ ಮೂಡಿ ಬಂದಿದ್ದು ಇದರ ಜೊತೆಗೆ ಮುದ್ದಾದ ಲವ್ ಸ್ಟೋರಿ ಕೂಡ ಇದೆ. ನವೆಂಬರ್ 4ರಂದು ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಲಿದ್ದು ಚಿತ್ರ ನೋಡಲು ಅಭಿಮಾನಿಗಳು ಕಾದು ಕೂತಿದ್ದಾರೆ.
