• June 20, 2026

ಯುವರಾಜ್ ಕುಮಾರ್ ಅಪ್ಪು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾನೆ: ನಟಿ ರಮ್ಯಾ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಗಂಧದ ಗುಡಿ ಟ್ರೈಲರ್ ಎರಡು ದಿನಗಳ ಹಿಂದಷ್ಟೇ ಬಿಡುಗಡೆ ಆಗಿದೆ. ಪುನೀತ್ ಪತ್ನಿ ಅಶ್ವೀನಿ ಪುನೀತ್ ರಾಜ್ ಕುಮಾರ್ ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದಲ್ಲಿ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಇದೀಗ ಗಂಧದ ಗುಡಿ ಪ್ರೀ ರಿಲೀಸ್ ಈವೇಂಟ್ ಗೆ ಕೌಂಟ್ ಡೌ್ನ್ ಶುರುವಾಗಿದ್ದು ಅದಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಇದೇ ತಿಂಗಳ 28ರಂದು ಗಂಧದ ಗುಡಿ ಸಿನಿಮಾ ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲು ಅಂದರೆ ಅ.21ರಂದು ಗಂಧದ ಗುಡಿ ಪ್ರೀ ರಿಲೀಸ್ ಈವೆಂಟ್ ಹಮ್ಮಿಕೊಳ್ಳಲಾಗುತ್ತಿದೆ, ಕಾರ್ಯಕ್ರಮಕ್ಕೆ ಅಶ್ವೀನಿ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್. ರಾಘವೇಂದ್ರ ರಾಜ್ ಕುಮಾರ್, ಯುವರಾಜ್ ಕುಮಾರ್ ಸೇರಿದಂತೆ ಕನ್ನಡದ ಜೊತೆಗೆ ಪರಭಾಷೆಯ ಮಂದಿಯೂ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಈಗಾಗ್ಲೆ ಗಂಧದ ಗುಡಿ ಪ್ರೀರಿಲೀಸ್ ಈವೇಂಟ್ ನ ಅದ್ದೂರಿ ಆಮಂತ್ರಣ ಪತ್ರಿಕೆ ತಯಾರಾಗಿದೆ. ಈ ಆಹ್ವಾನ ಪತ್ರಿಕೆಯನ್ನು ಸಂಪೂರ್ಣ ಮರದಿಂದ ತಯಾರಿಸಲಾಗಿದ್ದು, ಪತ್ರಿಕೆ ಜೊತೆಗೆ ಪುನೀತ್​ ರಾಜ್​ಕುಮಾರ್ ಪುತ್ಥಳಿಯನ್ನು ಇರಿಸಲಾಗಿದೆ. ಅಲ್ಲದೆ ಶ್ರೀಗಂಧದ ತುಂಡಿನ ಮೇಲೆ ಪುನೀತ್ ರಾಜ್​ಕುಮಾರ್​ಎಂದು ಬರೆದಿರುವ ಹಸ್ತಾಕ್ಷರ ಮುದ್ರಣ ಮಾಡಲಾಗಿದೆ. ಈಗಾಗಲೇ ಗಂಧದ ಗುಡಿ ಪ್ರೀರಿಲೀಸ್ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಅನೇಕರ ಕೈ ಸೇರಿದ್ದು ಇದೀಗ ನಟಿ ರಮ್ಯಾ ಅವರ ಕೈ ಸೇರಿದೆ. ನಟ ಯುವರಾಜ್ ಕುಮಾರ್ ಆಹ್ವಾನ ಪತ್ರಿಕೆಯನ್ನು ರಮ್ಯಾ ಅವರಿಗೆ ನೀಡಿದ್ದಾರೆ. ಅಹ್ವಾನ ಪತ್ರಿಕೆಯ ಜೊತೆಗೆ ಯುವರಾಜ್ ಕುಮಾರ್ ಜೊತೆಗಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಟಿ ರಮ್ಯಾ, ಮೈ ಸ್ವೀಟ್‌ ಯುವ ರಾಜ್‌ಕುಮಾರ್ ಈಗ ಚಿಕ್ಕವನಲ್ಲ. ಅಪ್ಪು ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾನೆ ಎಂದು ಬರೆದುಕೊಂಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now