• March 16, 2026

ಯುವ ದಸರಾದಲ್ಲಿ ಅಪ್ಪು ಹವಾ: ಪುನೀತ್ ನೆನೆದು ಕಣ್ಣೀರಿಟ್ಟ ಅಶ್ವಿನಿ

ವಿಶ್ವ ವಿಖ್ಯಾತ ಮೈಸೂರು ಯುವ ದಸರಾದ ಕಾರ್ಯಕ್ರಮ ಸಾಕಷ್ಟು ಅದ್ದೂರಿಯಾಗಿ ಆರಂಭಗೊಂಡಿದೆ. ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಹಾಗೂ ಕೇಂದ್ರಬಿಂದುವಾದ ಯುವ ದಸರಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಉದ್ಘಾಟನೆ ಮಾಡಿದರು. ಮೊದಲ ದಿನ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಮೀಸಲಿಟ್ಟಿದ್ದು ಅಪ್ಪು ನಮನ ಹೆಸರಿನಲ್ಲಿ ಜಿಲ್ಲಾಡಳಿತ ಕಾರ್ಯಕ್ರಮ ಆಯೋಜನೆ ಮಾಡಿದೆ. ಯುವ ದಸರಾ ವೇದಿಕೆಯಲ್ಲಿ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರ ಹಾಗೂ ರಾಜ್ ಕುಟುಂಬ ಸದಸ್ಯರಾದ ರಾಘವೇಂದ್ರ ರಾಜ್‌ಕುಮಾರ್, ವಿನಯ್, ಮಂಗಳ ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಸಾಕಷ್ಟು ಮಂದಿ ಉಪಸ್ಥಿತರಿದ್ದರು. ಈ ವೇಳೆ ಪುನೀತ್ ರಾಜ್ ಕುಮಾರ್ ಕಂಡು ಅಶ್ವೀನಿ ಪುನೀತ್ ರಾಜ್ ಕುಮಾರ್ ಕಣ್ಣೀರು ಹಾಕಿದರು. ಯುವ ದಸರಾಗೆ ಚಾಲನೆ ಸಿಗುತ್ತಿದ್ದಂತೆ ಅಭಿಮಾನಿಗಳು ಅಪ್ಪು ಅಪ್ಪು ಎಂದು ಪುನೀತ್ ರಾಜ್ ಕುಮಾರ್ ಫೋಟೋ ಹಿಡಿದು ಕೂಗಿದರು. ಮತ್ತೊಂದಡೆ ಪುನೀತ್ ರಾಜ್ ಕುಮಾರ್ ಹಾಡುಗಳಿಗೆ ಕಲಾವಿದರು ಹೆಜ್ಜೆ ಹಾಕಿದರು. ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಕನಸಿನ ಕೂಸು ಗಂಧದಗುಡಿ ಟೀಸರ್ ಪ್ರಸಾರ ಮಾಡಲಾಗಿದ್ದು  ವೇಳೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಭಾವುಕರಾಗಿ ಕಣ್ಣೀರು ಹಾಕಿದರು. ಯುವ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ರಾಘವೇಂದ್ರ ರಾಜ್​ ಕುಮಾರ್,  ಎಲ್ಲಾ ಅಭಿಮಾನಿ ದೇವರುಗಳಿಗೆ ಸಾಷ್ಟಾಂಗ ನಮಸ್ಕಾರ, ಎಲ್ಲರೂ ಅಪ್ಪು ಪ್ರೀತಿಸುತ್ತಿದ್ದಿರಿ, ಈಗ ಪೂಜಿಸುತ್ತಿದ್ದೀರಾ. ನಿಮ್ಮೆಲ್ಲರಲ್ಲೂ ಅಪ್ಪುವನ್ನು ಕಾಣುತ್ತಿದ್ದೇನೆ. ನಾನು ಇಲ್ಲೇ ಇದ್ದು ಒಂದು ಹಾಡು ಕೂಡ ಹಾಡುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದರು. ಜೊತೆಗೆ ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಹಾಡು ಹೇಳಿ ರಾಘವೇಂದ್ರ ರಾಜ್ ಕುಮಾರ್ ಭಾವುಕರಾದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now