ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಖ್ಯಾತ ನಟಿಯಂತಾಗಲು 12 ವರ್ಷದಲ್ಲಿ 40 ಬಾರಿ ಶಸ್ತ್ರಚಿಕಿತ್ಸೆಗೊಳಗಾದ ಯುವತಿ: ಕೊನೆಗೂ ಆಗಿದ್ದೇನು ಗೊತ್ತಾ?
29 ವರ್ಷದ ಮಾಡೆಲ್ ಜೆನಿಫರ್ ಪಂಪ್ಲೋನಾ ಅವರಿಗೆ ಕಿಮ್ ಕರ್ದಾಶಿಯನ್ ಎಂದರೆ ಎಲ್ಲಿಲ್ಲದ ಇಷ್ಟವಂತೆ. ಹೀಗಾಗಿ ಆಕೆಯಂತೆ ಕಾಣಬೇಕು ಎಂದುಕೊಂಡು ಇದುವರೆಗೂ ಸುಮಾರು 4.7 ಕೋಟಿ ಖರ್ಚು ಮಾಡಿ 40 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಆದರೆ ಇದೀಗ ಅಕೆ ಹೋದಲ್ಲಿ ಬಂದಲೆಲ್ಲಾ ಆಕೆಯನ್ನ ಕಿಮ್ ಹೆಸರಿನಿಂದಲೇ ಗುರುತಿಸೋಕೆ ಶುರುಮಾಡಿದ್ದಾರೆ. ಇದರಿಂದ ಕಿರಿ ಕಿರಿ ಅನುಭವಿಸಿದ ಜೆನಿಫರ್ ಮತ್ತೆ ತಮ್ಮ ಮೊದಲಿನ ರೂಪಕ್ಕೆ ಮರಳಲು ನಿರ್ಧರಿಸಿದ್ದಾರೆ. ಈಕೆ ತನ್ನ ಅಸಲಿ ಸೌಂದರ್ಯ ಪಡೆಯಲು ಅಂದಾಜು 1 ಕೋಟಿ ಖರ್ಚು ಮಾಡುತ್ತಿದ್ದಾರೆ.
ಜೆನಿಫರ್ ಮೊದಲು ತಮ್ಮ ದೇಹವನ್ನು ಪ್ಯಾಸ್ಟಿಕ್ ಸರ್ಜರಿಗೆ ಒಳಪಡಿಸಿದಾಗ ಕೇವಲ 17 ವರ್ಷ. ಸತತ 12 ವರ್ಷಗಳಲ್ಲಿ 40 ಬಾರಿ ವಿವಿಧ ಅಂಗಾಗಗಳ ಪ್ಯಾಸ್ಟಿಕ್ ಸರ್ಜರಿಗೆ ಒಳಗಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಜೆನಿಫರ್ ನನಗೆ ಮುಖ ಮತ್ತು ಕತ್ತಿನ ಲಿಫ್ಟ್ ಸರ್ಜರಿ, ಕೆನ್ನೆಗಳ ಕೊಬ್ಬ ಕರಗಿಸುವಿಕೆ, ಕಣ್ಣಿನ ಸರ್ಜರಿ, ತುಟಿ ಹಾಗೂ ಮೂಗಿನ ಸರ್ಜರಿಯನ್ನು ಒಂದೇ ಬಾರಿಗೆ ಮಾಡಲಾಯಿತು. ಅಪರೇಷನ್ ಥಿಯೇಟರ್ ಒಳಗೆ ಹೋದಾಗ ಒಬ್ಬ ವ್ಯಕ್ತಿಯಾಗಿ ಹೋದೆ ಹೊರ ಬರುವಾಗ ಮತ್ತೊಬ್ಬ ವ್ಯಕ್ತಿಯಾಗಿ ಬಂದೇ ಎಂದು ಹೇಳಿದ್ದಾರೆ.ತಿ: ಕೊನೆಗೂ ಆಗಿದ್ದೇನು ಗೊತ್ತಾ?
ಕಿಮ್ ಕರ್ದಾಶಿಯಾನ್ ಹೆಸರು ಬಹುತೇಕರಿಗೆ ಗೊತ್ತೆ ಇದೆ. ಫ್ಯಾಷನ್ ಲೋಕದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಈಕೆ ಅದೆಷ್ಟೋ ಜನರಿಗೆ ರೋಲ್ ಮಾಡೆಲ್. ಈಕೆಯಂತೆ ಕಾಣಬೇಕು ಎಂದು ಸಾಕಷ್ಟು ಮಂದಿ ಲಕ್ಷ ಗಟ್ಟಲೆ ಖರ್ಚು ಮಾಡ್ತಾರೆ. ಇದೀಗ ಅಂತಹ ಸಾಹಸಕ್ಕೆ ಕೈ ಹಾಕಿದ ಮಾಡೆಲ್ ಒಬ್ಬರು ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದು ಅಲ್ಲದೆ ಇದ್ದ ಸೌಂದರ್ಯವನ್ನು ಹಾಳು ಮಾಡಿಕೊಂಡಿದ್ದಾರೆ.
