ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ದೇಹ ದಂಡಿಸುವಲ್ಲಿ ಬ್ಯುಸಿಯಾದ ರಾಕಿಂಗ್ ಸ್ಟಾರ್: ಮುಂದಿನ ಸಿನಿಮಾಗಾಗಿ 15 ಕೆಜಿ ತೂಕ ಇಳಿಸಿಕೊಳ್ಳಲಿರೋ ಯಶ್
ಯಶ್ ಮುಂದಿನ ಸಿನಿಮಾ ಕನ್ನಡದಲ್ಲೇ ಇರಲಿದ್ದು, ನರ್ತನ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿದೆ. ನರ್ತನ ಈಗಾಗ್ಲೆ ಮಫ್ತಿ ಸಿನಿಮಾದ ನಿರ್ದೇಶನ ಮಾಡಿ ಮೊದಲ ಸಿನಿಮಾದಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಹೀಗಾಗಿ ರಾಕಿ ಬಾಯ್ ಜೊತೆಗಿನ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಕೊಂಚ ಜಾಸ್ತಿಯೇ ನಿರೀಕ್ಷೆಇದೆ.
ಯಶ್ ಹಾಗೂ ನರ್ತನ್ ಕಾಂಬಿನೇಷನ್ ನ ಸಿನಿಮಾ ಯಾವ ರೀತಿ ಇರಲಿದೆ? ಯಶ್ ಮುಂದಿನ ಸಿನಿಮಾದಲ್ಲಿ ಅವರ ಲುಕ್ ಹೇಗಿರಲಿದೆ ಎಂಬ ಪ್ರಶ್ನೆ ಹರಿದಾಡ್ತಿದೆ. ಈ ಮಧ್ಯೆ ಯಶ್ ಮಾತ್ರ ತಮ್ಮ ಪಾಡಿಗೆ ತಾವು ದೇಹ ಹುರಿಗೊಳಿಸುವುದರಲ್ಲಿ ಬ್ಯುಸಿಯಾಗಿದ್ದಾರೆ.
ಮೂಲಗಳ ಪ್ರಕಾರ ನರ್ತನ್ ನಿರ್ದೇಶನದ ಮುಂದಿನ ಸಿನಿಮಾಗೆ ಯಶ್ ದೇಹವನ್ನು ದಂಡಿಸುತ್ತಿದ್ದಾರೆ ಎನ್ನಲಾಗ್ತಿದೆ. ಜಿಮ್ ತರಬೇತುದಾರ ಪಾನಿಪುರಿ ಕಿಟ್ಟಿ ಗರಡಿಯಲ್ಲಿ ಯಶ್ ದೇಹವನ್ನು ಹುರಿಗೊಳಿಸುತ್ತಿದ್ದು ಸುಮಾರು 15 ಕೆಜಿ ತೂಕ ಇಳಿಸಿಕೊಳ್ಳಲಿದ್ದಾರಂತೆ.
ಒಟ್ನಲ್ಲಿ ಯಶ್ ಮುಂದಿನ ಸಿನಿಮಾಗಾಗಿ ದೇಶ ವಿದೇಶದಲ್ಲೂ ಅಭಿಮಾನಿಗಳು ಕಾಯ್ತಿದ್ದು ರಾಕಿ ಬಾಯ್ ಮುಂದಿನ ಗೆಟಪ್ ನೋಡಲು ಅಭಿಮಾನಿಗಳು ಕಾದು ಕೂತಿದ್ದಾರೆ.
