ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಿರುತೆರೆ ನಟ ಯಲಹಂಕ ಬಾಲಾಜಿ ಇಂದು ನಿಧನರಾಗಿದ್ದಾರೆ. ಟಿ.ಎನ್.ಸೀತಾರಾಮ್ ನಿರ್ದೇಶನದ ಸಾಕಷ್ಟು ಧಾರವಾಹಿಗಳಲ್ಲಿ ಬಾಲಾಜಿ ನಟಿಸಿದ್ದರು. ಬಾಲಾಜಿ ಅವರ ನಿಧನದ ಕುರಿತು ಟಿ.ಎನ್.ಸೀತಾರಾಮ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
‘ಅತ್ಯಂತ ಹೃದಯವಂತ ಗೆಳೆಯ. ಎಲ್ಲ ಕಷ್ಟಗಳಲ್ಲೂ, ಸಂತೋಷಗಳಲ್ಲೂ ಜತೆಗೆ ಇರುತ್ತಿದ್ದ ಮನುಷ್ಯ. ಇಡೀ ಬದುಕಿನುದ್ದಕ್ಕೂ ಕಷ್ಟ ಕಂಡಿದ್ದರೂ, ನಗುತ್ತಾ ಬದುಕಿದ ಗೆಳೆಯ. ಬಾಲಾಜಿ ಇನ್ನಿಲ್ಲ ಎಂದು ನೆನಪಿಸಿಕೊಂಡರೆ ಅಪಾರ ಸಂಕಟವಾಗುತ್ತದೆ’ ಎಂದು ಟಿ.ಎನ್.ಸೀರಾತಾಮ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು ಅಗಲಿದ ಗೆಳೆಯನಿಗೆ ಕಂಬನಿ ಮಿಡಿದಿದ್ದಾರೆ.

ಟಿ.ಎನ್.ಸೀತಾರಾಮ್ ನಿರ್ದೇಶನದ ಮಾಯಾಮೃಗ ಧಾರವಾಹಿಯಿಂದ ಹಿಡಿದು ಇತ್ತೀಚಿನ ಮಗಳು ಜಾನಕಿ ಧಾರವಾಹಿಗಳ ವರೆಗೂ ಯಲಯಂಕ ಬಾಲಾಜಿ ನಟಿಸಿದ್ದರು. ರಂಗಭೂಮಿ ಹಾಗೂ ಚಲನಚಿತ್ರಗಳಲ್ಲೂ ಬಾಲಾಜಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.