ಕೆಜಿಎಫ್ ಸಿನಿಮಾ ರಿಲೀಸ್ ಆದ ಬಳಿಕ ಯಶ್ ದೇಶ ವಿದೇಶದಲ್ಲೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಕೆಜಿಎಫ್ ಬಳಿಕ ಯಶ್ ನಟನೆಯ ಮುಂದಿನ ಸಿನಿಮಾ ಯಾವುದು ಅನ್ನೋ ಪ್ರಶ್ನೆ ಶುರುವಾಗಿದೆ. ಪರಭಾಷೆಯ ನಿರ್ದೇಶಕರು ಯಶ್ ಕಾಲ್ ಶೀಟ್ ಗಾಗಿ ಕಾದು ಕೂತಿದ್ದು ಇದೀಗ ಯಶ್ ಟೀಂ ಕಡೆಯಿಂದ ಹೊಸ ವಿಷಯವೊಂದ ಹೊರ ಬಿದ್ದಿದೆ.
ಕೆಜಿಎಫ್ ಸಿನಿಮಾದ ಬಳಿಕ ಯಶ್ ಗೆ ಆಕ್ಷಯ್ ಕಟ್ ಹೇಳೋಕೆ ಪರಭಾಷೆಯ ನಿರ್ದೇಶಕರು ಕ್ಯೂನಲ್ಲಿ ನಿಂತಿದ್ದಾರೆ. ಆದರೆ ಯಶ್ ಕಾಲ್ ಶೀಟ್ ಸಿಕ್ಕಿದ್ದು ಮಾತ್ರ ಸ್ಯಾಂಡಲ್ ವುಡ್ ನಿರ್ದೇಶಕ ನರ್ತನ್ ಗೆ ಎನ್ನಲಾಗ್ತಿತ್ತು. ಆದರೆ ಈ ಬಗ್ಗೆ ಯಶ್ ಆಗಲಿ ಅಥವಾ ನಿರ್ದೇಶಕ ನರ್ತನ್ ಆಗಲಿ ಯಾವುದೇ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಈ ಮಧ್ಯೆ ಮತ್ತೊಂದು ಹೊಸ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ನರ್ತನ್ ಸಿನಿಮಾಗೂ ಮೊದಲು ಯಶ್ ಮತ್ತೊಂದು ಬಿಗ್ ಬಜೆಟ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಮಾತನಾಡಿದ ನಿರ್ದೇಶಕ ನರ್ತನ್ ಸಿನಿಮಾ ರಂಗ ಎಂದರೆ ಅಲ್ಲಿ ವದಂತಿಗಳು ಇರಲೇ ಬೇಕು. ಯಶ್ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವುದು ಒಂದು ವಾರದೊಳಗೆ ಗೊತ್ತಾಗಲಿದೆ ಎಂದಿದ್ದಾರೆ. ಹೀಗಾಗಿ ಯಶ್ ಒಂದು ವಾರದೊಳಗೆ ಮುಂದಿನ ಸಿನಿಮಾದ ಬಗ್ಗೆ ನಿರ್ಧರಿಸಲಿದ್ದಾರೆ. ಯಶ್ ಮುಂದಿನ ಸಿನಿಮಾದ ಅಪ್ ಡೇಟ್ ಗಾಗಿ ಕಾಯುತ್ತಿರೋ ಅಭಿಮಾನಿಗಳಿಗೆ ಒಂದು ವಾರದಲ್ಲಿ ಗುಡ್ ನ್ಯೂಸ್ ಸಿಗಲಿದೆ ಅನಿಸುತ್ತಿದೆ.