ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಹಾವು ಕಡಿತದಿಂದ ಚಿಕಿತ್ಸೆ ಪಡೆಯುತ್ತಿದ್ದ ಸ್ನೇಕ್ ಲೋಕೇಶ್ ಸಾವು
ತಕ್ಷಣವೇ ಸ್ನೇಕ್ ಲೋಕೇಶ್ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಿ ಬಳಿಕ ಬೆಂಗಳೂರಿನ ಮಣಿಪಾಲ್‍ಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಎಲ್ಲೆ ಹಾವುಗಳು ಇವೆ ಎಂಬ ಮಾಹಿತಿ ಸಿಕ್ಕರು ತಕ್ಷಣವೇ ಅಲ್ಲಿಗೆ ಹೋಗಿ ಅವುಗಳನ್ನು ಸ್ನೇಕ್ ಲೋಕೇಶ್ ರಕ್ಷಿಸುತ್ತಿದ್ದರು. ಇದುವರೆಗೂ 35 ಸಾವಿರಕ್ಕೂ ಅಧಿಕ ವಿವಿಧ ಜಾತಿಯ ಉರಗಗಳು, ಪ್ರಾಣಿ ಪಕ್ಷಿಗಳನ್ನು ರಕ್ಷಿಸಿದ್ದಾರೆ.
ಸಂಗೀತದಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದ ಸ್ನೇಕ್ ಲೋಕೇಶ್ ಕೆಲವು ಧಾರವಾಹಿ, ಹಾಗೂ ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. ನೆಲಮಂಗಲದಲ್ಲಿ ಸಣ್ಣದೊಂದು ಹೋಟೆಲ್ ಇಟ್ಟುಕೊಂಡ ಜೀವನ ನಡೆಸುತ್ತಿದ್ದ ಸ್ನೇಕ್ ಲೋಕೇಶ್ ಹಾವು ಕಡಿತದಿಂದಲೇ ಮೃತಪಟ್ಟಿರುವುದು ವಿಪರ್ಯಾಸ.
