ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ವಿಕ್ಕಿ ನಟನೆ ನೋಡಿ ಆತನ ಬಗ್ಗೆ ತಲೆಕೆಡಿಸಿಕೊಂಡಿದ್ದೆ: ಕತ್ರಿನಾ ಕೈಫ್
ನನಗಿನ್ನೂ ನೆನಪಿದೆ ನನಗೆ ನಿರ್ಮಾಪಕ ಆನಂದ್ ಎಲ್ ರೈ ಮನ್ಮರ್ಜಿಯಾನ್ ಚಿತ್ರದ ಪ್ರೋಮೋ ತೋರಿಸಿದರು. ನಾನು ಈ ವ್ಯಕ್ತಿ ಯಾರು? ಎಂದು ಕೇಳಿದ್ದೆ. ಅದಕ್ಕೆ ಪ್ರತಿಕ್ರಿಯಿಸಿದ ಆನಂದ್, ವಿಕ್ಕಿ ಕೌಶಲ್ ಬಗ್ಗೆ ಹೇಳಿ, ಅದ್ಭುತವಾಗಿ ಹಾಗೂ ತುಂಬಾ ನೈಜವಾಗಿ ನಟಿಸಿದ್ದಾರೆ. ಅವರಲ್ಲಿ ಅಪಾರ ಪ್ರತಿಭೆ ಇದೆ’ ಎಂದಿದ್ದರು. ಅಲ್ಲಿಂದ ವಿಕ್ಕಿ ಕೌಶಲ್ ಮೇಲೆ ನನ್ನ ಗಮನ ಹೆಚ್ಚಾಯಿತು ಎಂದು ಕತ್ರಿನಾ ಹೇಳಿದ್ದಾರೆ.
ಗ್ಯಾಂಗ್ಸ್ ಆಫ್ ವಾಸೇಪುರ್ ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗುವ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ವಿಕ್ಕಿ ಕೌಶಲ್ ಮಸಾನ್ ಸಿನಿಮಾದ ಮೂಲಕ ನಾಯಕನಾಗಿ ಕಾಣಿಸಿಕೊಂಡರು. ವಿಕ್ಕಿ ಕೌಶಲ್ ಗೆ ಸಾಕಷ್ಟು ಹೆಸರು ತಂದುಕೊಟ್ಟಿದ್ದು 2019ರಲ್ಲಿ ತೆರೆಕಂಡ ಉರಿ ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾ.
ಸದ್ಯ ವಿಕ್ಕಿ ಕೌಶಲ್ ನಟನೆಯ ನಾಲ್ಕು ಸಿನಿಮಾಗಳು ಕಂಪ್ಲೀಟ್ ಆಗಿದ್ದು ಎರಡು ಸಿನಿಮಾಗಳು ಶೂಟಿಂಗ್ ಹಂತದಲ್ಲಿದೆ. ಇನ್ನು ಕತ್ರಿನಾ ಕೈಫ್ ನಟನೆಯ ಫೋನ್ ಬೂತ್ ಸಿನಿಮಾ ಇದೇ ನವೆಂಬರ್ 4ರಂದು ರಿಲೀಸ್ ಆಗುತ್ತಿದೆ. ಜೊತಗೆ ವಿಜಯ್ ಸೇತುಪತಿ ಜೊತೆ ಮೇರಿ ಕ್ರಿಸ್ಮಸ್ ಹಾಗೂ ಸಲ್ಮಾನ್ ಖಾನ್ ಜೊತೆ ಟೈಗರ್ 3 ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ.
