ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕ್ರೇಜಿಸ್ಟಾರ್ ಪುತ್ರನಿಗೆ ಕೂಡಿ ಬಂತು ಕಂಕಣ ಭಾಗ್ಯ: ಮನೋರಂಜನ್ ಕೈ ಹಿಡಿಯಲಿರೋ ಹುಡುಗಿ ಯಾರು ಗೊತ್ತಾ?
ಮೂಲಗಳ ಪ್ರಕಾರ ಆಗಸ್ಟ್ 21 ಹಾಗೂ 22ರಂದು ರವಿಚಂದ್ರನ್ ಹಾಗೂ ಸುಮತಿ ದಂಪತಿಯ ಹಿರಿಯ ಮಗ ಮನೋರಂಜನ್ ಹಸೆಮಣೆ ಏರಲಿದ್ದಾರಂತೆ. ವೃತ್ತಿಯಲ್ಲಿ ವೈದ್ಯರಾಗಿರುವ ಯುವತಿಯ ಜೊತೆ ಮನೋರಂಜನ್ ಮದುವೆ ಆಗಲಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ರವಿಚಂದ್ರನ್ ಆಗಲಿ ಅಥವಾ ಅವರ ಕುಟುಂಬ ಸದಸ್ಯರಾಗಲಿ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.
2017ರಲ್ಲಿ ತೆರೆಕಂಡ ಸಾಹೇಬ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಮನೋರಂಜನ್ ಬಳಿಕ ಬೃಹಸ್ಪತಿ, ಮುಗಿಲು ಪೇಟೆ ಹಾಗೂ ಈ ವರ್ಷ ತೆರೆ ಕಂಡ ಪ್ರಾರಂಭ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಒಂದರ ಹಿಂದೊಂದರಂತೆ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಮನೋರಂಜನ್ ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
