• March 14, 2026

ಸಲಾರ್ ಸಿನಿಮಾ ಕಡೆಯಿಂದ ಹೊಸ ಅಪ್ ಡೇಟ್: ಚಿತ್ರ ನೋಡಲು ಕಾಯಲೇ ಬೇಕು ಇನ್ನೊಂದು ವರ್ಷ

ಪ್ರಶಾಂತ್ ನೀಲ್ ನಿರ್ದೇಶನದ ತೆಲುಗಿನ ಮೊಟ್ಟ ಮೊದಲ ಸಿನಿಮಾ ಸಲಾರ್ ಟೀಮ್ ನಿಂದ ಹೊಸ ನ್ಯೂಸ್ ಸಿಕ್ಕಿದೆ. ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಿನಿಮಾ ಇದೇ ವರ್ಷ ರಿಲೀಸ್ ಆಗಲಿದೆ ಎನ್ನಲಾಗುತ್ತಿತ್ತು. ಆದರೆ ಇದೀಗ ಚಿತ್ರತಂಡದ ಕಡೆಯಿಂದ ಹೊಸ ನ್ಯೂಸ್ ಸಿಕ್ಕಿದೆ. ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲೇ ಸಲಾರ್ ತೆರೆಗೆ ಬಿಡುಗಡೆ ಆಗಲಿದೆ ಎನ್ನಲಾಗುತ್ತಿತ್ತು.  ಆದ್ರೆ ಇದೀಗ ಚಿತ್ರತಂಡದಿಂದ ಚಿತ್ರದ ಬಿಡುಗಡೆ ಕುರಿತಾಗಿ ಅಪ್ ಡೇಟ್ ಸಿಕ್ಕಿದೆ. ಆಗಸ್ಟ್ 15ರಂದು ಸಲಾರ್ ಸಿನಿಮಾದ ಕಡೆಯಿಂದ ಅಪ್ ಡೇಟ್ ಸಿಗಲಿದೆ ಎಂದು ಈ ಹಿಂದೆ ಹೊಂಬಾಳೆ ಫಿಲ್ಮ್ಸ್ ತಿಳಿಸಿತ್ತು. ಕೊಟ್ಟ ಮಾತಿನಂತೆ ಹೊಸ ಅಪ್ ಡೇಟ್ ನೀಡಿದ್ದರು ಇದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಇದೇ ವರ್ಷ ಸಲಾರ್ ಸಿನಿಮಾ ಬಿಡುಗಡೆ ಆಗುತ್ತೆ ಎಂದು ಕಾದು ಕೂತಿದ್ದ ಅಭಿಮಾನಿಗಳಿಗೆ ಸಿನಿಮಾ ತಂಡದಿಂದ ನಿರಾಸೆ ಉಂಟಾಗಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಲಾರ್ ಸಿನಿಮಾ 28 ಸೆಪ್ಟೆಂಬರ್ 2023ರಲ್ಲಿ ರಿಲೀಸ್ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ಅಧಿಕೃತ ಮಾಹಿತಿ ನೀಡಿದೆ. ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ನಟನೆಯ ಈ ಸಲಾರ್ ಸಿನಿಮಾ ಹಲವು ಭಾಷೆಗಳಲ್ಲಿ ತಯಾರಾಗುತ್ತಿದೆ. ಇನ್ನೂ ಗ್ರಾಫಿಕ್ಸ್ ಕೆಲಸ ಆಗಬೇಕಿದೆ ಮತ್ತು ಶೂಟಿಂಗ್ ಕೂಡ ಬಾಕಿ ಇದೆ. ಹೀಗಾಗಿ ಕೊಂಚ ಲೇಟ್ ಆಗಿ ಸಿನಿಮಾ ಬಿಡುಗಡೆ ಆಗಲಿದೆ. ಹೀಗಾಗಿ ಸಲಾರ್ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಇನ್ನೂ ಒಂದು ವರ್ಷ ಕಾಯುವುದು ಅನಿವಾರ್ಯವಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now