• March 14, 2026

ಕಾಂತಾರ ಸಿನಿಮಾ ವೀಕ್ಷಿಸಿ ಹೊರ ಬರುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು

ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ವೀಕ್ಷಿಸಿ ಹೊರ ಬರುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲದ ವೆಂಕಟೇಶ್ವರ ಚಿತ್ರಮಂದಿರದಲ್ಲಿ ನಡೆದಿದೆ. ನಾಗಮಂಗಲ ತಾಲ್ಲೂಕಿನ ಸಾರೆಮೇಗಲಕೊಪ್ಪ ನಿವಾಸಿ ರಾಜಶೇಖರ್ ಮೃತ ದುರ್ದೈವಿ. 45 ವರ್ಷ ವಯಸ್ಸಿನ ರಾಜಶೇಖರ್ ಸಾಕಷ್ಟು ದಿನಗಳಿಂದ ಕಾಂತಾರ ಸಿನಿಮಾ ವೀಕ್ಷಿಸಬೇಕು ಎಂದುಕೊಂಡಿದ್ದರು. ಅಂತೆಯೇ ನಿನ್ನೆ ವೆಂಕಟೇಶ್ವರ ಚಿತ್ರಮಂದಿರಕ್ಕೆ ಆಗಮಿಸಿ ಚಿತ್ರ ವೀಕ್ಷಿಸಿ ಖುಷಿಯಿಂದಲೇ ಹೊರ ಬಂದಿದ್ದರು. ಆದರೆ ಅಷ್ಟರಲ್ಲೇ ದುರಂತ ನಡೆದು ಹೋಗಿದೆ. ರಾಜಶೇಖರ್ ಗೆ ಥಿಯೇಟರ್ ನಿಂದ ಆಚೆ ಬರುವಾಗ ಎದೆನೋವು ಕಾಣಿಸಿಕೊಂಡಿದೆ. ತಕ್ಷವೇ ಅಲ್ಲಿಯೇ ಕುಸಿದು ಕೂತಿದ್ದಾರೆ. ತೀವ್ರ ಹೃದಯಾಘಾತವಾಗಿ ಸ್ಥಳದಲ್ಲೇ ರಾಜಶೇಖರ್ ನಿಧನರಾಗಿದ್ದಾರೆ . ಈ ಬಗ್ಗೆ ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ರಾಜಶೇಖರ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಖುಷಿಯಿಂದಲೇ ಸಿನಿಮಾ ನೋಡಲು ಹೋಗಿದ್ದ ಕುಟುಂಬದ ಸದಸ್ಯನನ್ನು ಈ ರೀತಿ ಕಳೆದುಕೊಳ್ಳುತ್ತೇವೆ ಎಂದು ಅಂದುಕೊಂಡಿರಲಿಲ್ಲ ಎಂದು ಸದಸ್ಯರು ಗೋಳಾಡುತ್ತಿದ್ದ ಸನ್ನಿವೇಶ ಮನ ಕಲಕುವಂತಿತ್ತು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now