ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಭಗವಾನ್ ಶ್ರೀ ನಿತ್ಯಾನಂದ ಸಿನಿಮಾ ತಂಡಕ್ಕೆ ಸಾಥ್ ನೀಡಿದ ಅವಧೂತ ವಿನಯ್ ಗುರೂಜಿ
ನಿರ್ಮಾಪಕ ಕೃಷ್ಣ ಕೆ.ಆರ್ ಮಾತನಾಡಿ, ಭಗವಾನ್ ಶ್ರೀ ನಿತ್ಯಾನಂದ ಸಿನಿಮಾದ ಟೈಟಲ್ ಹಾಗೂ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದು, ನಮ್ಮ ಫ್ಯಾಮಿಲಿ ಭಗವಾನ್ ನಿತ್ಯಾನಂದ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದೇವೆ. ಈ ಸಿನಿಮಾ ಮಾಡುವ ಮೂಲಕ ಚಿಕ್ಕದೊಂದು ಅಳಿಲು ಸೇವೆ ಮಾಡುತ್ತಿದ್ದೇವೆ ಎಂದರು.
ಸಿನಿಮಾಗೆ The endless one ಭಗವಾನ್ ಶ್ರೀ ನಿತ್ಯಾನಂದ ಎಂಬ ವಿಭಿನ್ನ ಶೀರ್ಷಿಕೆ ಇಡಲಾಗಿದ್ದು, ಲಕ್ಷ್ಮಸ್ ಸ ಖೋಡೇ ಅವರ ಮರಿ ಮಗ, ಪದ್ಮಾನಾಭ ಸ ಖೋಡೇ ಅವರ ಮೊಮ್ಮಗ ಶ್ರೀಕೃಷ್ಣ ಕೆ ಆರ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಗುಲಾಬ್ ಪ್ರೊಡಕ್ಷನ್ ನಡಿಯಲ್ಲಿ ತಯಾರಾಗ್ತಿರುವ ಚೊಚ್ಚಲ ಸಿನಿಮಾ ಇದಾಗಿದ್ದು, ಅದ್ಧೂರಿಯಾಗಿ ಚಿತ್ರ ನಿರ್ಮಾಣ ನಿರ್ಮಾಪಕ ಕೃಷ್ಣ ಸಜ್ಜಾಗಿದ್ದು, ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ, ಮಲಯಾಳಂ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಸಿನಿಮಾ ಮೂಡಿಬರಲಿದೆ. ಸದ್ಯದಲ್ಲಿಯೇ ಉಳಿದ ಸ್ಟಾರ್ ಕಾಸ್ಟ್, ತಂತ್ರಜ್ಞಾನರ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.
