ನಟ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಕನ್ನಡದ ಜೊತೆಗೆ ಪರಭಾಷೆಯ ಮಂದಿಯೂ ಸಿನಿಮಾ ಕಣ್ಮುಂಬಿಕೊಳ್ಳೋಕೆ ಕಾಯ್ತಿದ್ದಾರೆ. ಈ ಮಧ್ಯೆ ಸುದೀಪ್ ಪ್ರಚಾರ ಕಾರ್ಯದಲ್ಲಿ ಫುಲ್ ಬ್ಯುಸಿಯಾಗಿದ್ದು, ನಿನ್ನೆ ಬೆಂಗಳೂರಿನ ಲೂಲು ಮಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದೀಪ್ ಸಖತ್ತಾಗೆ ಸ್ಟೆಪ್ ಹಾಕಿದ್ದಾರೆ. ಈ ವೇಳೆ ಸುದೀಪ್ ಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್ ನೀಡಿದ್ದಾರೆ.
ಸುದೀಪ್ ಹಾಗೂ ಅನೂಪ್ ಬಂಡಾರಿ ಕಾಂಬಿನೇಷನ್ ನ ವಿಕ್ರಾಂತ್ ರೋಣ ಸಿನಿಮಾ ಹಲವು ಕಾರಣಗಳಿಂದ ಸುದ್ದಿಯಾಗಿದೆ. ಮೊನ್ನೆಯಷ್ಟೇ ದುಬೈನಲ್ಲಿ ಚಿತ್ರದ ವರ್ಲ್ಡ್ ಪ್ರೀಮಿಯಲ್ ಮಿಗಿಸಿರುವ ಚಿತ್ರತಂಡ ಇದೀಗ ಸಿನೆಬಡ್ಸ್ ಹೆಸರಿನ ಆ್ಯಪ್ ಹೊರ ತಂದಿದೆ. ಈ ಆ್ಯಪ್ ಮೂಲಕ ಸಿನಿ ರಸಿಕರು ವಿಕ್ರಾಂತ್ ರೋಣ ಸಿನಿಮಾವನ್ನು ತನ್ನಿಷ್ಟದ ಭಾಷೆಯಲ್ಲಿ ನೋಡುವ ಅವಕಾಶವನ್ನು ಚಿತ್ರತಂಡ ಒದಗಿಸಿದೆ.
ಮುಂಬೈನಲ್ಲಿ ವಿಕ್ರಾಂತ್ ರೋಣ ಪ್ರಚಾರ ಮುಗಿಸಿದ ಸುದೀಪ್ ಬೆಂಗಳೂರಿನಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರು. ಮುಂಬೈನಲ್ಲಿ ಕಿಚ್ಚನಿಗೆ ನಟ ಸಲ್ಮಾನ್ ಖಾನ್ ಹಾಗೂ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಾಥ್ ನೀಡಿದ್ದು ಈ ವೇಳೆ ಮೂವರು ವೇದಿಕೆ ಮೇಲೆ ರಾ ರಾ ರಕ್ಕಮ್ಮ ಹಾಡಿಗೆ ಸಖತ್ತಾಗೆ ಸ್ಟೆಪ್ ಹಾಕಿದ್ರು. ಹಿಂದಿಯಲ್ಲಿ ಕಿಚ್ಚನ ಬೆನ್ನಿಗೆ ಸಲ್ಮಾನ್ ಖಾನ್ ನಿಂತಿದ್ರೆ, ತೆಲುಗಿನಲ್ಲಿ ನಾಗಾರ್ಜುನ್ ಸಾಥ್ ನೀಡ್ತಿದ್ದಾರೆ, ಇನ್ನೂ ಕನ್ನಡದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೋತೆಯಾಗಿದ್ದಾರೆ.

ಸುದೀಪ್ ಹಾಗೂ ಉಪೇಂದ್ರರನ್ನೂ ಸಾಕಷ್ಟು ಅದ್ದೂರಿಯಾಗಿ ವೇದಿಕೆ ಮೇಲೆ ವೆಲ್ ಕಮ್ ಮಾಡಲಾಯಿತು. ಬಳಿಕ ಕಿಚ್ಚನನ್ನು ರಿಯಲ್ ಸ್ಟಾರ್ ಕೊಂಡಾಡಿದರು. ಸುದೀಪ್‌ನನ್ನು ನೋಡಿ ಹೀರೋ ಅಗಿ ಎಂದಿದ್ದೆ, ಆದ್ರೆ ಅವರಿಂದು ಸೂಪರ್ ಸ್ಟಾರ್ ಆಗಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ. ಯಶ್ ಪ್ಯಾನ್ ಇಂಡಿಯಾ ಹೊಡಿತೀವಿ ಅಂದ್ರು. ಈಗ ನಾವು ಪ್ಯಾನ್ ವರ್ಲ್ಡ್ ಹೊಡಿತೀವಿ. ವಿಕ್ರಾಂತ್ ರೋಣ ಅಂದ್ರೆ ವಿಕ್ಟರಿ ರೋಣ. ನಾನು ಫಸ್ಟ್ ಡೇ ಸಿನಿಮಾ ನೋಡ್ತಿನಿ, ಅದು ಕ್ರೌಡ್‌ನಲ್ಲಿ ಎಂದರು.

ವಿಕ್ರಾಂತ್ ರೋಣ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರಲಿದೆ. ಸಾಕಷ್ಟು ಸಮಯದಿಂದ ವಿಕ್ರಾಂತ್ ರೋಣನಿಗಾಗಿ ಕಾದು ಕೂತಿರೋ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ನೋಡಲು ಕಾದು ಕೂತಿದ್ದಾರೆ.