ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮೊದಲ ದಿನವೇ ಕೆಜಿಎಫ್ 2 ದಾಖಲೆ ಮುರಿದ ವಿಕ್ರಾಂತ್ ರೋಣ
ವಿಕ್ರಾಂತ್ ರೋಣ ಮೊದಲ ದಿನ 2500 ಸ್ಕ್ರೀನ್ ಗಳಲ್ಲಿ 9500ಕ್ಕೂ ಅಧಿಕ ಶೋಗಳು ನಡೆಯಲಿವೆ. ಮೊಟ್ಟ ಮೊದಲ ಬಾರಿಗೆ ಸುದೀಪ್ ನಟನೆಯ ಸಿನಿಮಾವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. 2 ಡಿ ಹಾಗೂ 3ಡಿಯಲ್ಲೂ ವಿಕ್ರಾಂತ್ ರೋಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಎಲ್ಲೆಲ್ಲೂ ವಿಕ್ರಾಂತ್ ರೋಣ ಸದ್ದು ಮಾಡುತ್ತಿದ್ದು ಈ ಮೂಲಕ ಯಶ್ ನಟನೆಯ ಕೆಜಿಎಫ್ ಸಿನಿಮಾದ ದಾಖಲೆಯನ್ನು ಮುರಿದಿದೆ. ಮೊದಲ ಸ್ಥಾನದಲ್ಲಿ ವಿಕ್ರಾಂತ್ ರೋಣ ಇದ್ದರೆ ಎರಡನೇ ಸ್ಥಾನದಲ್ಲಿ ಕೆಜಿಎಫ್, ಮೂರನೇ ಸ್ಥಾನದಲ್ಲಿ ಜೇಮ್ಸ್, ನಾಲ್ಕನೇ ಸ್ಥಾನದಲ್ಲಿ ಯುವರತ್ನ ಹಾಗೂ ಐದನೇ ಸ್ಥಾನದಲ್ಲಿ ಪೊಗರು ಸಿನಿಮಾವಿದೆ.
ವಿಕ್ರಾಂತ್ ರೋಣನ ಕಲೆಕ್ಷನ್ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಮೂಲಗಳ ಪ್ರಕಾರ ಮೊದಲ ದಿನ 50ಕೋಟಿಗೂ ಅಧಿಕ ಕಲೆಕ್ಷನ್ ಆಗುವ ನಿರೀಕ್ಷೆ ಇದೆ.
