ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಗಿಚ್ಚಿ ಗಿಲಿ ಗಿಲಿ ಬಳಿಕ ಮತ್ತೆ ಬಂದ ವನ್ಷಿಕಾ: ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2ಕ್ಕೆ ಈಕೆಯೇ ನಿರೂಪಕಿ
ಕಳೆದ ಕೆಲ ದಿನಗಳ ಹಿಂದಷ್ಟೇ ಗಿಚ್ಚಿ ಗಿಲಿ ಗಿಲಿ ಶೋ ಮುಗಿದಿದ್ದು ವಂಶಿಕಾ ಗೆದ್ದು ಬೀಗಿದ್ದಾಳೆ. ಅಷ್ಟರಲ್ಲಾಗಲೆ ಮತ್ತೊಮ್ಮೆ ವೇದಿಕೆ ಮೇಲೆ ಬರಲು ವನ್ಷಿಕಾ ರೆಡಿಯಾಗಿದ್ದಾಳೆ. ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2ಕ್ಕೆ ಪುಟಾಣಿ ಪ್ರತಿಭೆ ವನ್ಷಿಕಾ ನಿರೂಪಣೆ ಮಾಡಲಿದ್ದಾಳೆ.
ಅದೆಷ್ಟೋ ಭಾರಿ ಆನಂದ್ ತನ್ನ ಮಗಳ ಬಗ್ಗೆ ಹೇಳಿಕೊಂಡಿದ್ದರು. ಇದುವರೆಗೂ ಮಾಸ್ಟರ್ ಆನಂದ್ ಎಂದು ಗುರುತಿಸುತ್ತಿದ್ದವರು ಇಂದು ವನ್ಷಿಕಾ ತಂದೆಯೆಂದು ಹೇಳುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು. ಒಟ್ನಲ್ಲಿ ವಿದ್ಯಾಭ್ಯಾಸದ ಜೊತೆ ಜೊತೆಗೆ ಬಣ್ಣದ ಲೋಕದಲ್ಲೂ ಮಿಂಚುತ್ತಿರುವ ವಂಶಿಕಾ ತಂದೆಯಂತೆ ತಾನೂ ಕೂಡ ನಿರೂಪಕಿಯಾಗಿ ಪ್ರೇಕ್ಷಕರ ಮನ ಗೆಲ್ಲಲ್ಲು ರೆಡಿಯಾಗಿದ್ದಾಳೆ.
