• January 1, 2026

ವಾಮನ ಸಿನಿಮಾದ ಜಬರ್ದಸ್ತ್ ಟೀಸರ್ ರಿಲೀಸ್: ಆಕ್ಷನ್ ಮೂಡ್ ನಲ್ಲಿ ಶೋಕ್ದಾರ್ ಧನ್ವೀರ್

ಶೋಕ್ದಾರ್ ಖ್ಯಾತಿಯ ಧನ್ವೀರ್ ಗೌಡ ನಟಿಸ್ತಿರುವ ಬಹುನಿರೀಕ್ಷಿತ ವಾಮನ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಜಬರ್ದಸ್ತ್ ಆಗಿ ಮೂಡಿ ಬಂದಿರುವ ಟೀಸರ್ ಝಲಕ್ ನಲ್ಲಿ ಧನ್ವೀರ್ ಮಾಸ್ ಲುಕ್ ನಲ್ಲಿ ಮಿಂಚಿದ್ದಾರೆ. ಅದ್ಧೂರಿ ಸೆಟ್, ಭರ್ಜರಿ ಆಕ್ಷನ್, ಧನ್ವೀರ್ ನಯಾ ಗೆಟಪ್, ಬ್ಯಾಗ್ರೌಂಡ್ ಮ್ಯೂಸಿಕ್, ವಿಷ್ಯೂವಲ್ಸ್ ಎಫೆಕ್ಟ್ ಟೀಸರ್ ನಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಪಂಚಿಂಗ್ ಡೈಲಾಗ್ ಹೊಡೆಯುತ್ತಾ ಎಂಟ್ರಿ ಕೊಡುವ ಧನ್ವೀರ್ ಗುಣ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. 1.50 ನಿಮಿಷ ಇರುವ ವಾಮನ ಸಿನಿಮಾದ ಟೀಸರ್ ತುಣುಕು ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸ್ತಿದ್ದು, ಶಂಕರ್ ರಾಮನ್ ಸಾರಥ್ಯದಲ್ಲಿ ಚಿತ್ರ ಮೂಡಿ ಬರ್ತಿದೆ. ಧನ್ವೀರ್ ಗೆ ಜೋಡಿಯಾಗಿ ಏಕ್ ಲವ್ ಯಾ ಬೆಡಗಿ ರೀಷ್ಮಾ ನಾಣಯ್ಯ ನಟಿಸ್ತಿದ್ದಾರೆ. ಈಗಾಗಲೇ 70 ದಿನ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಸದ್ಯ ಬಾಕಿ ಉಳಿದ ಭಾಗದ ಚಿತ್ರೀಕರಣದಲ್ಲಿ ನಿರತವಾಗಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಖ್ಯಾತಿ ಗಳಿಸಿರುವ ಚೇತನ್ ಕುಮಾರ್ ತಮ್ಮದೇ ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ ಟೈನ್ಮೆಂಟ್ ನಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಲವ್ ಸ್ಟೋರಿ ಜೊತೆಗೆ ಔಟ್ ಅಂಡ್ ಔಟ್ ಆಕ್ಷನ್ ಕಮರ್ಷಿಯಲ್ ಸಿನಿಮಾವಾಗಿರುವ ವಾಮನದಲ್ಲಿ ಖಳನಾಯಕನಾಗಿ ಸಂಪತ್ ನಟಿಸುತ್ತಿದ್ದು, ಉಳಿದಂತೆ ಅಚ್ಯುತ್ ಕುಮಾರ್, ತಾರಾ, ಶಿವರಾಜ್ ಕೆ ಆರ್ ಪೇಟೆ ಮತ್ತು ಕಾಕ್ರೋಚ್ ಸುದಿ ಸೇರಿದಂತೆ ಹಲವು ತಾರಾಬಳಗ ಚಿತ್ರದಲ್ಲಿದೆ. ಬಿ.ಅಜನೀಶ್ ಲೋಕನಾಥ್ ಸಂಗೀತ, ಮಹೇನ್ ಸಿಂಹ ಕ್ಯಾಮೆರಾ ಕೈಚಳಕ, ಸುರೇಶ್ ಆರ್ಮುಖ ಸಂಕಲನ, ಅರ್ಜುನ್ ರಾಜ್ ಆಕ್ಷನ್ ಸಿನಿಮಾಕ್ಕಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now