ಗುಜರಾತ್ ನ ಜನಪ್ರಿಯ ಗಾಯಕಿ ವೈಶಾಲಿ ಬನ್ಸಾರ ಮೃತದೇಹ ಇತ್ತೀಚೆಗೆ ಅವರ ಕಾರಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಇದೀಗ ಅಘಾತಕಾರಿ ಮಾಹಿತಿಯೊಂದು ಸಿಕ್ಕಿದೆ. ವೈಶಾಲಿ ಅವರನ್ನು ಕೊಲೆ ಮಾಡಲಾಗಿದ್ದು ಸ್ನೇಹಿತೆಯೇ ಕೊಲೆ ಮಾಡಿದ್ದಾಳೆ ಎನ್ನುವುದು ತಿಳಿದು ಬಂದಿದೆ.
ಮೃತ ವೈಶಾಲಿ ಫೇಸ್ ಬುಕ್ ಸ್ನೇಹಿತೆ ಬಬಿತ ಎನ್ನುವವಳು ವೈಶಾಲಿ ಅವರನ್ನು ಹಣಕ್ಕಾಗಿ ಕೊಲೆ ಮಾಡಿರುವುದು ತನಿಖೆಯಿಂದ ಬಯಲಾಗಿದೆ. ಮೃತ ಗಾಯಕಿ ವೈಶಾಲಿ ಹಾಗೂ ಸ್ನೇಹಿತ ಬಬಿತಾ ನಡುವೆ 25 ಲಕ್ಷ ರೂಪಾಯಿಯ ವ್ಯವಹಾರ ನಡೆದಿದ್ದು, ಇದೇ ವಿಚಾರವಾಗಿ ಬಬಿತ ವೈಶಾಲಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಕಾರಿನಲ್ಲಿ ಶವ ಬಿಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳೆದ ಐದು ದಿನಗಳ ಹಿಂದೆ ವಲ್ಸಾದ್ ಜಿಲ್ಲೆಯ ಪಾರ್ ನದಿಯ ದಡದಲ್ಲಿ ಕಾರೊಂದು ಅನುಮಾನಾಸ್ಪದವಾಗಿ ಸಾಕಷ್ಟು ಸಮಯದಿಂದ ನಿಂತಿತ್ತು. ಹೀಗಾಗಿ ಸ್ಥಳಿಯರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಬಂದು ಪರಿಶೀಲಿಸಿದ್ದಾಗ ಅದರಲ್ಲಿ ಗಾಯಕಿ ವೈಶಾಲಿ ಅವರ ಮೃತ ದೇಹ ಪತ್ತೆಯಾಗಿತ್ತು.

ವೈಶಾಲಿ ಅವರ ಮರಣೋತ್ತರ ಪರೀಕ್ಷೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರಿಗೆ ಸ್ನೇಹಿತೆಯೆ ಕೊಲೆ ಮಾಡಿರುವುದು ಎನ್ನುವುದು ತಿಳಿದು ಬಂದಿದೆ.