ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ವಿ ಮೆಗಾ ಪಿಕ್ಚರ್ಸ್ ಹಾಗೂ ಅಭಿಷೇಕ್ ಅಗರ್ ವಾಲ್ ಆರ್ಟ್ ಜಂಟಿಯಾಗಿ ನಿರ್ಮಿಸುತ್ತಿರುವ ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್..ರಾಮ್ ಚರಣ್ ನಿರ್ಮಾಣದಲ್ಲಿ ನಿಖಿಲ್ ಸಿದಾರ್ಥ್ ನಟನೆ..’ದಿ ಇಂಡಿಯನ್ ಹೌಸ್’ ಪವರ್ ಪ್ಯಾಕ್ಡ್ ಮೋಷನ್ ವಿಡಿಯೋ ರಿಲೀಸ್..
ಪವರ ಪ್ಯಾಕ್ಡ್ ವಿಡಿಯೋ ಮೂಲಕ ರಾಮ್ ತಮ್ಮ ನಿರ್ಮಾಣದ ಚೊಚ್ಚಲ ಪ್ಯಾನ್ ಇಂಡಿಯಾ ಚಿತ್ರ ಯಾವುದು ಎಂಬ ಪ್ರಶ್ನೆಗೆ ಉತ್ತರಕೊಟ್ಟಿದ್ದಾರೆ. ವಿ ಮೆಗಾ ಪಿಕ್ಚರ್ಸ್ ಹಾಗೂ ಅಭಿಷೇಕ್ ಅಗರ್ ವಾಲ್ ಆರ್ಟ್ ಬ್ಯಾನರ್ ಜಂಟಿಯಾಗಿ ದಿ ಇಂಡಿಯನ್ ಹೌಸ್ ಎಂಬ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಾರ್ತಿಕೇಯ, ಕಾರ್ತಿಕೇಯ-೨ ನಂತಹ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾಗಳ ಡೈನಾಮಿಕ್ ಹೀರೋ ನಿಖಿಲ್ ಸಿದ್ದಾರ್ಥ್ ನಾಯಕನಾಗಿ ದಿ ಇಂಡಿಯನ್ ಹೌಸ್ ನಲ್ಲಿ ಬಣ್ಣ ಹಚ್ಚಿದ್ದು, ಬಾಲಿವುಡ್ ದಂತಕಥೆ ಅನುಪಮ್ ಕೇರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯುವಪ್ರತಿಭೆ ರಾಮ್ ವಂಶಿ ಕೃಷ್ಣ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಭಾರತೀಯ ಇತಿಹಾಸದಲ್ಲಿ ಮರೆತುಹೋದ ಅಧ್ಯಾಯ, 1905ರಲ್ಲಿ ನಡೆದ ಲಂಡನ್ ಕ್ರಾಂತಿ ಜೊತೆ ಪ್ರೇಮಕಥೆಯಾಧಾರಿತ ಕಥಾಹಂದರ ಹೊಂದಿರುವ ದಿ ಇಂಡಿಯನ್ ಹೌಸ್ ಸಿನಿಮಾ ಮೂಲಕ ನಿಖಿಲ್ ಮತ್ತೊಂದು ಕಥೆಯನ್ನು ಬೆನ್ನಟ್ಟಿದ್ದಾರೆ. ಸ್ಪೈ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ನಿಖಿಲ್ ಸಿದ್ದಾರ್ಥ್ ಈ ಸಿನಿಮಾ ಮೂಲಕ ಮತ್ತೊಮ್ಮೆ ಮ್ಯಾಜಿಕ್ ಮಾಡುವ ತವಕದಲ್ಲಿದ್ದಾರೆ
