ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ನಟ ಸ್ನೇಹಿತ್ ಬೆನ್ನಿಗೆ ನಿಂತ ರಿಯಲ್ ಸ್ಟಾರ್: ಸೌಂದರ್ಯ ಜಗದೀಶ್ ಪುತ್ರ ಒಳ್ಳೆಯ ಹುಡುಗ ಎಂದ ಉಪೇಂದ್ರ
ಮಗನ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ಸ್ನೇಹಿತ್ ಪೋಷಕರು ಪ್ರೇಸ್ ಮೀಟ್ ಕರೆದಿದ್ದಾರೆ. ನನ್ನ ಮಗ ಚಿನ್ನ, ಅವನನ್ನು ಪಡೆಯಲು ಅದೃಷ್ಟ ಮಾಡಿದ್ದೇವೆ. ಬೇಕಂತಲೆ ನನ್ನ ಮಗನ ಮೇಲೆ ದೂರು ಆರೋಪ ಮಾಡಿದ್ದಾರೆ. ಇದರಲ್ಲಿ ನನ್ನ ಮಗನ ಪಾತ್ರವೇನು ಇಲ್ಲ ಎಂದಿದ್ದಾರೆ. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಸ್ನೇಹಿತ್ ಬೆನ್ನಿಗೆ ನಿಂತಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ರಿಯಲ್ ಸ್ಟಾರ್ ಉಪೇಂದ್ರ, ‘ಸೌಂದರ್ಯ ಜಗದೀಶ್ ಹಾಗೂ ನನ್ನ ಪರಿಚಯ, ಸ್ನೇಹ ಸುಮಾರು 25 ವರ್ಷಗಳಷ್ಟು ಹಳೆಯದು. ಅಂದಿನಿಂದ ಇಂದಿನವರೆಗೂ ನಾನು ಕಂಡಂತೆ ಜಗದೀಶ್ ತುಂಬಾ ಮೃದು ಸ್ವಭಾವದವರು, ಸ್ನೇಹ ಜೀವಿ ಅವರ ಶ್ರೀಮತಿ ರೇಖಾ ಮತ್ತು ಮಗ ಸ್ನೇಹಿತ್ ಹಾಗೂ ಮಗಳು ಸೌಂದರ್ಯ ಕೂಡಾ ನಮ್ಮ ಕುಟುಂಬಕ್ಕೆ ಪರಿಚಯ. ಇತ್ತೀಚೆಗೆ ಸ್ನೇಹಿತ್ ಬಗ್ಗೆ ಕೇಳಿಬರುತ್ತಿರುವ ಆರೋಪಗಳನ್ನು ಕೇಳಿ ದಿಗ್ಭ್ರಮೆ ಆಯಿತು. ನಾನು ಕಂಡಂತೆ ಈತ ತುಂಬಾ ವಿನಯವಂತ, ಬೆಳೆಯುತ್ತಿರುವ ಹುಡುಗ, ಏಕೆ ಈ ರೀತಿ ಆರೋಪ ಮಾಡಿದ್ದಾರೆ ಎಂದು ನನಗೆ ತಿಳಿಯದು. ಏನಾದರೂ ಭಿನ್ನಾಭಿಪ್ರಾಯಗಳಿದ್ದರೆ ಸಮಾಧಾನದಿಂದ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಒಂದಂತೂ ಎಲ್ಲರಿಗೂ ಅನ್ವಯಿಸುವ ಸತ್ಯ. ಅಜ್ಞಾನದ ಫಲ ಅಹಂಕಾರ, ಅಹಂಕಾರದ ಫಲ ದ್ವೇಷ, ದ್ವೇಷದ ಫಲ ಸರ್ವನಾಶ ಎಂದು ಉಪೇಂದ್ರ ಬರೆದುಕೊಂಡಿದ್ದಾರೆ.
