• March 18, 2026

ಹುಟ್ಟುಹಬ್ಬದಂದು ಅಭಿಮಾನಿಗಳನ್ನು ಮನೆಗೆ ಆಹ್ವಾನಿಸಿದ ಉಪೇಂದ್ರ: ವಿಭಿನ್ನ ಟಾಸ್ಕ್ ನೀಡಿದ ರಿಯಲ್ ಸ್ಟಾರ್

ರಿಯಲ್ ಸ್ಟಾರ್ ಉಪೇಂದ್ರ ಏನೇ ಮಾಡಿದ್ರು ಡಿಫರೆಂಟ್ ಆಗಿ ಮಾಡ್ತಾರೆ. ಉಪ್ಪಿ ನಟನೆಯ ಸಿನಿಮಾವಾಗಿರ್ಲಿ, ನಿರ್ದೇಶನದ ಚಿತ್ರವೇ ಆಗಿರ್ಲಿ ಡಿಫರೆಂಟ್ ಆಗಿ ತೆಗೆಯೋದ್ರಲ್ಲಿ ಉಪ್ಪಿ ಎತ್ತಿದ ಕೈ. ಸದ್ಯದಲ್ಲೇ ಉಪೇಂದ್ರ ಬರ್ತಡೇ ಇದ್ದು ಈ ಹಿನ್ನೆಲೆಯಲ್ಲಿ ಉಪ್ಪಿ ಡಿಫರೆಂಟ್ ಟಾಸ್ಕ್ ಒಂದನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ಉಪ್ಪಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಇದೇ ಸೆಪ್ಟೆಂಬರ್ 18ರಂದು ಉಪ್ಪಿ ಬರ್ತಡೇ ಇದ್ದು ಈ ಕುರಿತಾಗಿ ರಿಯಲ್ ಸ್ಟಾರ್ ಟ್ವಿಟರ್ ಖಾತೆಯಲ್ಲಿ ಘೋಷಣೆಯೊಂದನ್ನು ಮಾಡಿದ್ದಾರೆ. ಉಪ್ಪಿ ಬರ್ತಡೇಯಂದು ಅಭಿಮಾನಿಗಳನ್ನು ಮನೆಗೆ ಆಹ್ವಾನಿಸಿದ್ದು ಜೊತೆಗೆ 18 ಪದಗಳೊಳಗೆ ಉತ್ತಮ ವಿಚಾರವನ್ನು ಬರೆದುಕೊಂಡು ಬರುವಂತೆ ತಿಳಿಸಿದ್ದಾರೆ. ‘ವಿಚಾರವಂತರಾಗೋಣಾ? ಇದೇ ಸೆಪ್ಟೆಂಬರ್ 18 ಅಭಿಮಾನಿಗಳ ದಿನದಂದು ನಿಮ್ಮನ್ನ ನಮ್ಮ ಮನೆಯಲ್ಲಿ ಭೇಟಿಯಾಗುತ್ತೇನೆ. ಆ ದಿನ ಕೇಕ್, ಹೂಗುಚ್ಚ, ಗಿಫ್ಟ್ ಎಲ್ಲಾ ಬಿಟ್ಟು.. ಒಂದು ಹಾಳೆಯಲ್ಲಿ 18 ಪದಗಳನ್ನು ಮೀರದಂತೆ ಏನಾದರೂ ಒಂದು ಉತ್ತಮ ವಿಚಾರವನ್ನು ಬರೆದು ತರುತ್ತೀರಾ? ಅತ್ಯುತ್ತಮವಾದ 18 ಬರವಣಿಗೆಗೆ ಸೂಕ್ತ ಬಹುಮಾನವಿರುತ್ತದೆ’ ಎಂದು ಉಪೇಂದ್ರ ಪೋಸ್ಟ್​ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳಿಗೆ ಖುಷಿ ಪಟ್ಟಿದ್ದು ಬರೆಯಬಹುದಾದ ವಿಚಾರದ ಬಗ್ಗೆ ಚರ್ಚೆ ಶುರುಮಾಡಿದ್ದಾರೆ. ಸದ್ಯ ಉಪೇಂದ್ರ ಕಜ್ಬ ಹಾಗೂ ಯುಐ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಹುಟ್ಟಹಬ್ಬದಂದ ಈ ಸಿನಿಮಾಗಳ ಅಪ್ ಡೇಟ್ ಜೊತೆಗೆ ಹೊಸ ಸಿನಿಮಾ ಘೋಷಿಸುತ್ತಾರಾ ಎಂದು ಅಭಿಮಾನಿಗಳು ಕಾದು ಕೂತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now