ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕಾಂತಾರ’ ಚಿತ್ರವನ್ನು ಉಲ್ಲೇಖಿಸಿದ ಕೇಂದ್ರ ಸಚಿವ ಪೀಯೂಷ್ ಗೋಯಲ್
ಹೂಡಿಕೆದಾರರ ಜೊತೆ ಮಾತನಾಡಿದ ಸಚಿವರು, ‘ಸ್ಥಳೀಯ ಸಂಸ್ಕೃತಿ, ಆಚರಣೆಯ ಕಥಾಹಂದರ ಇರುವ ಚಿತ್ರ ಈ ಚಿತ್ರದ ತಯಾರಿಕೆಗೆ ಸಣ್ಣ ಬಂಡವಾಳವನ್ನೇ ಹೂಡಲಾಗಿದೆ. ಆದರೆ, ಈಗ ಆ ಚಿತ್ರ 300 ಕೋಟಿಗೂ ಹೆಚ್ಚು ಗಳಿಸಿದೆ. ಕಾಂತಾರ ಚಿತ್ರವನ್ನು ನಾನೂ ವೀಕ್ಷಿಸಿದ್ದೇನೆ. ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸ್ಥಳಿಯ ಕಥೆಯನ್ನೇ ಜಾಗತಿಕ ಮಟ್ಟದಲ್ಲಿ ಹೇಳುವಂತೆ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ’ ಎಂದು ಚಿತ್ರದ ಕುರಿತು ಮೆಚ್ಚುಗೆ ಸೂಚಿಸಿದರು.
ಕಳೆದ ಸೆಪ್ಟೆಂಬರ್ 30ರಂದು ತೆರೆಕಂಡ ಕಾಂತಾರ ಚಿತ್ರ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. ಎಲ್ಲಾ ಸಿನಿಮಾಗಳ ದಾಖಲೆಯನ್ನು ಹಿಂದಿಕ್ಕುತ್ತಿರುವ ಕಾಂತಾರ ಚಿತ್ರ ಮುನ್ನೂರು ಕೋಟಿ ಅಧಿಕ ಕಲೆಕ್ಷನ್ ಮಾಡುತ್ತಿದೆ. ಚಿತ್ರ ತೆರೆಕಂಡು ಒಂದು ತಿಂಗಳು ಕಳೆದಿದ್ರು ಸಾಕಷ್ಟ ಕಡೆಗಳಲ್ಲಿ ಇನ್ನೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
