• February 10, 2026

ಸಚಿವ ಕತ್ತಿ ನಿಧನಕ್ಕೆ 1 ದಿನ ಶೋಕಾಚರಣೆ: ಅಸಮಾಧಾನ ಹೊರ ಹಾಕಿದ ಸಿದ್ದರಾಮಯ್ಯ

ಬೆಂಗಳೂರು: ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ನಿಧನಕ್ಕೆ ಸರ್ಕಾರ ಒಂದು ದಿನ ಶೋಕಾಚರಣೆ ಘೋಷಣೆ ಮಾಡಿದಕ್ಕೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕತ್ತಿ ಅವರಿಗೆ ಸಾಯುವ ವಯಸ್ಸಾಗಿರ್ಲಿಲ್ಲ. ನನಗೆ ಕತ್ತಿ ಒಳ್ಳೆಯ ಸ್ನೇಹಿತ ಎಂದಿದ್ದಾರೆ. ಕತ್ತಿ ನಿಧನದ ಶೋಕಾಚರಣೆ ಮೂರು ದಿನ ಮಾಡಬಹುದಿತ್ತು. ಯಾಕೆ ಒಂದೇ ದಿನ ಘೋಷಣೆ ಮಾಡಿದ್ದಾರೋ ಗೊತ್ತಿಲ್ಲ. ಕತ್ತಿ ಸಿಟ್ಟಿಂಗ್ ಮಿನಿಸ್ಟರ್ ಆಗಿರೋರು, ಅವರ ನಿಧನಕ್ಕೆ ಸರ್ಕಾರ ಮೂರು ದಿನ ಶೋಕಾಚರಣೆ ಘೋಷಿಸಬಹುದಿತ್ತು. ಆದರೆ ಏಕೆ ಒಂದೇ ದಿನ ಶೋಕಾಚರಣೆ ಘೋಷಿಸಿದೆಯೋ ಗೊತ್ತಿಲ್ಲ, ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದಿದ್ದಾರೆ. ಸಾಮಾನ್ಯವಾಗಿ ಗಣ್ಯರ ನಿಧನ ವೇಳೆ ಸರ್ಕಾರ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸುತ್ತದೆ. ಈ ಹಿಂದೆ ಎಚ್ ಎಸ್ ಮಹಾದೇವ ಪ್ರಸಾದ್, ಅಂಬರೀಷ್, ಗಿರೀಶ್ ಕಾರ್ನಾಡ್, ಸಿದ್ದಗಂಗಾಶ್ರೀ, ಪೇಜಾವರ ಶ್ರೀ ನಿಧನರಾದ ಸಂದರ್ಭದಲ್ಲಿ ಮೂರು ದಿನ ಶೋಕಾಚರಣೆಯನ್ನು ಸರ್ಕಾರ ಘೋಷಿಸಿತ್ತು. ಆದರೆ ಉಮೇಶ್ ಕತ್ತಿ ನಿಧನದ ಶೋಕಾಚರಣೆಯನ್ನು ಒಂದೇ ದಿನ ಘೋಷಿಸಿರುವ ಕತ್ತಿ ಅಭಿಮಾನಿಗಳಿಗೆ ಬೇಸರ ತರಿಸಿದೆ.

ಇಂದು 12ಗಂಟೆಗೆ ಸ್ವಗ್ರಾಮ ಬೆಲ್ಲದ ಬಾಗೇವಾಡಿ ಗ್ರಾಮಕ್ಕೆ ಮೃತದೇಹ ಶಿಪ್ಟ್ ಮಾಡಲಾಗುತ್ತೆ. 12ರಿಂದ ಸಂಜೆ ಐದು ಗಂಟೆ ವರೆಗೂ ಬೆಲ್ಲದ ಬಾಗೇವಾಡಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ. ಐದು ಗಂಟೆಗೆ ಉಮೇಶ್ ಕತ್ತಿಯವರ ಜಮೀನಿನಲ್ಲಿ ತಂದೆ ತಾಯಿಯ ಸಮಾಧಿ ಪಕ್ಕದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now