ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಲಿದ್ದಾರೆ ಆ ಇಬ್ಬರು ಸ್ಟಾರ್ಸ್: ಸಿಎಂ ಸ್ಪಷ್ಟನೆ
ರಜನಿಕಾಂತ್ ಗೂ ಬೆಂಗಳೂರಿಗೆ ಉತ್ತಮ ನಂಟಿದೆ. ತಮಿಳು ಚಿತ್ರರಂಗದಲ್ಲಿ ಖ್ಯಾತಿ ಘಳಿಸಿದ್ದರು ರಜನಿಕಾಂತ್ ಹುಟ್ಟಿ ಬೆಳೆದಿದೆಲ್ಲ ಬೆಂಗಳೂರಿನಲ್ಲಿ. ಅಲ್ಲದೆ ಡಾ.ರಾಜ್ ಕುಮಾರ್ ಫ್ಯಾಮಿಲಿ ಜೊತೆ ರಜನಿಕಾಂತ್ ಅವರಿಗೆ ಉತ್ತಮ ಬಾಂದವ್ಯವಿದೆ.
ಇನ್ನೂ ನಟ ಜೂನಿಯರ್ ಎನ್ ಟಿ ಆರ್ ತಾಯಿ ಕರ್ನಾಟಕದವರು. ಜೊತೆಗೆ ಜೂನಿಯರ್ ಎನ್ ಟಿ ಆರ್ ಕೂಡ ರಾಜ್ ಕುಮಾರ್ ಕುಟುಂದೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದರು. ಪುನೀತ್ ರನ್ನು ಸಹೋದರ ಸಮನರಾಗಿ ಕಾಣುತ್ತಿದ್ದರು. ಹಾಗಾಗಿ ಇಬ್ಬರಿಗೂ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ನೀಡಲಾಗಿದೆ.
ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗಿದ್ದು, ಇಂಥದ್ದೊಂದು ಗೌರವಕ್ಕೆ ಈ ಮೊದಲು ಡಾ.ರಾಜ್ ಕುಮಾರ್ ಕೂಡ ಪಾತ್ರರಾಗಿದ್ದಾರೆ. ನವೆಂಬರ್ 1 ರಂದು ವಿಧಾನಸೌಧದ ಮುಂಭಾಗದಲ್ಲಿ ಆಯೋಜನೆ ಮಾಡಿದ್ದು, ಡಾ.ರಾಜ್ ಕುಟುಂಬ ಹಾಗೂ ಅಭಿಮಾನಿಗಳು ಸಾಕ್ಷಿಯಾಗಲಿದ್ದಾರೆ.
