ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ವಿಕ್ರಾಂತ್ ರೋಣ ಚಿತ್ರ ನೋಡುವಾಗ ಮರಾಮಾರಿ: ಥಿಯೇಟರ್ ನಲ್ಲೇ ನಡೆಯಿತು ಹಲ್ಲೆ
ಚಿಕ್ಕಮಗಳೂರಿನ ಮಿಲನ ಥಿಯೇಟರ್ ನಲ್ಲಿ ಸಿನಿಮಾ ನೋಡುತ್ತಿದ್ದ ವೇಳೆ ವ್ಯಕ್ತಿಯೋರ್ವ ಪದೇ ಪದೇ ಥಿಯೇಟರ್ ನಿಂದ ಹೊರ ಹೋಗುವುದು ಒಳ ಬರುವುದು ಮಾಡುತ್ತಿದ್ದ. ಇದಿರಿಂದ ಸಿನಿಮಾ ನೋಡುತ್ತಿದ್ದ ಇತರರಿಗೂ ತೊಂದರೆ ಆಗುತ್ತಿತ್ತು. ಈ ಬಗ್ಗೆ ಪ್ರಶ್ನೆ ಮಾಡಿದಾಗ ವ್ಯಕ್ತಿಗೂ ಇತರರಿಗೆ ಜಗಳ ಶುರುವಾಗಿದೆ.
ಎರಡೂ ಗುಂಪಿನವರು ಥಿಯೇಟರ್ ನಲ್ಲೇ ಲಾಂಗು, ಮಚ್ಚು ಹಿಡಿದು ಹೊಡೆದಾಡಿದ್ದಾರೆ. ಘಟನೆಯಲ್ಲಿ ಭರತ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಗಾಯಗೊಂಡು ನೆಲದ ಮೇಲೆ ಬಿದ್ದಿದ್ದರು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಸದ್ಯ ಚಿಕ್ಕಮಗಳೂರಿನಲ್ಲಿ ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
