• January 1, 2026

ಖ್ಯಾತ ಕಿರುತೆರೆ ನಟಿ ವೈಶಾಲಿ ಠಕ್ಕರ್ ಆತ್ಮಹತ್ಯೆ

ಹಿಂದಿಯ ಹಲವಾರು ಧಾರವಾಹಿಗಳ ಮೂಲಕ ಹೆಸರು ಮಾಡಿ ಬಿಗ್ ಬಾಸ್ ನಲ್ಲಿ ಖ್ಯಾತಿ ಘಳಿಸಿದ್ದ ಕಿರುತೆರೆ ಕಿರುತೆರೆ ಕಲಾವಿದೆ ವೈಶಾಲಿ ಠಕ್ಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ವೈಶಾಲಿ ಮೃತದೇಹ ಇಂದೋರ್ ನ ಅವರನ ಮನೆಯಲ್ಲಿ ನೇಣು ಬಿಗಿರದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ವೈಶಾಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದ ವೈಶಾಲಿ ಇತ್ತೀಚೆಗಷ್ಟೇ ಕೆಲವೊಂದು ರೀಲ್ಸ್ ಗಳನ್ನು ಶೇರ್ ಮಾಡಿದ್ದರು. ಆ ರೀಲ್ಸ್ ಗಳಲ್ಲಿ ಸಖತ್ ಖುಷಿಯಾಗಿದ್ದ ವೈಶಾಲಿ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿರುವುದು ಕುಟುಂಬಸ್ಥರಿಗೆ, ಸ್ನೇಹಿತರಿಗೆ ಹಾಗೂ  ಅಭಿಮಾನಿಗಳಿಗೆ  ಶಾಕ್ ಆಗಿದೆ. ವೈಶಾಲಿ ಮೃತದೇಹದ ಪಕ್ಕ ಡೆತ್ ನೋಟ್ ಲಭ್ಯವಾಗಿದೆ. ಆದರೂ ವೈಶಾಲಿ ಸಾವು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ತೇಜಾಜಿ ನಗರ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 2021ರಲ್ಲಿ ಡಾ.ಅಭಿನಂದನ್ ಸಿಂಗ್ ಎಂಬುವವರ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ವೈಶಾಲಿ ಠಕ್ಕರ್ ಅದೇ ವರ್ಷ ಹಸೆಮಣೆ ಏರಬೇಕಿತ್ತು. ಎಂಗೇಜ್ ಮೆಂಟ್ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿಹಂಚಿಕೊಂಡಿದ್ದರು. ಆದರೆ ಬಳಿಕ ಎಂಗೇಜ್ ಮೆಂಟ್ ಮುರಿದು ಬಿದ್ದಿತ್ತು. ಹೀಗಾಗಿ ಎಂಗೇಜ್ ಮೆಂಟ್ ಮುರಿದುಬಿದ್ದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದ ವೈಶಾಲಿ ಆ ವಿಡಿಯೋವನ್ನು ಡಿಲೀಟ್ ಮಾಡಿದ್ದರು. ಹಿಂದಿ ಕಿರುತೆರೆಯಲ್ಲಿ ವೈಶಾಲಿ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದರು. ‘ಸಸುರಾಲ್​ ಸಿಮರ್​ ಕಾ’ ಧಾರಾವಾಹಿಯಲ್ಲಿ ಅಂಜಲಿ ಭಾರದ್ವಾಜ್​, ‘ಸೂಪರ್​ ಸಿಸ್ಟರ್ಸ್​’ ಧಾರಾವಾಹಿಯಲ್ಲಿ ಶಿವಾನಿ ಶರ್ಮಾ, ‘ಮನಮೋಹಿನಿ 2’ ಸೀರಿಯಲ್​ನಲ್ಲಿ ಅನನ್ಯಾ ಮಿಶ್ರಾ ಪಾತ್ರಗಳಲ್ಲಿ ವೈಶಾಲಿ ನಟಿಸಿದ್ದರು.   ‘ಯೇ ರಿಷ್ತಾ ಕ್ಯಾ ಕೆಹಲಾತಾ ಹೈ’, ‘ಯೇ ಹೈ ಆಶಿಕಿ’, ‘ರಕ್ಷಾ ಬಂಧನ್​’ ಮುಂತಾದ ಧಾರಾವಾಹಿಗಳಲ್ಲಿ ವೈಶಾಲಿ ಠಕ್ಕರ್​ ನಟಿಸಿದ್ದರು. ಅಭಿಮಾನಿಗಳು ವೈಶಾಲಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.  

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now