• March 15, 2026

ಜನಾರ್ದನ್ ರೆಡ್ಡಿ ಪುತ್ರ ಕಿರೀಟಿ ಚಿತ್ರದ ಟೈಟಲ್ ಲಾಂಚ್ ಗೆ ಕೌಂಟ್ ಡೌನ್

ರಾಜಕಾರಣಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಸ್ಯಾಂಡಲ್ ವುಡ್ ಸಿನಿ ಇಂಡಸ್ಟ್ರಿಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿರೋದು ಗೊತ್ತೆ ಇದೆ. ಕಿರೀಟಿ ನಟನೆಯ ಮೊದಲ ಸಿನಿಮಾದ ಮುಹೂರ್ತ ಸಖತ್ ಅದ್ದೂರಿಯಾಗಿ ನಡೆದಿದ್ದು ನಿರ್ದೇಶಕ ರಾಜ ಮೌಳಿ ಕಿರೀಟಿಗೆ ಸಾಥ್ ನೀಡಿದ್ದರು. ಇತ್ತೀಚೆಗಷ್ಟೇ ನಟ ಶಿವರಾಜ್ ಕುಮಾರ್ ಕಿರೀಟಿ ಸಿನಿಮಾದ ಶೂಟಿಂಗ್ ಸೆಟ್ ಗೆ ಭೇಟಿ ನೀಡಿ ಕೆಲ ಸಮಯ ಸಿನಿಮಾ ತಂಡದ ಜೊತೆ ಕಳೆದಿದ್ದರು. ಇದೀಗ ಕಿರೀಟಿ ನಟನೆಯ ಮೊದಲ ಸಿನಿಮಾದ ಟೈಟಲ್ ಲಾಂಚ್ ಗೆ ಕೌಂಟ್ ಡೌನ್ ಶುರುವಾಗಿದೆ. ಕಿರೀಟಿ ನಟನೆಯ ಸಿನಿಮಾದ ಶೂಟಿಂಗ್ ಆರಂಭವಾಗಿ ಕೆಲಸ ಸಮಯವೇ ಕಳೆದಿದೆ. ಈಗಾಗ್ಲೆ ಇಂಟ್ರಡಕ್ಷನ್ ಟೀಸರ್ ಮೂಲಕ ಗಮನ ಸೆಳೆದಿರೋ ಕಿರೀಟಿ ನಟನೆಯ ಸಿನಿಮಾದ ಟೈಟಲ್ ಏನು ಅನ್ನೊದು ಇದುವರೆಗೂ ರಿವೀಲ್ ಮಾಡಿರಲಿಲ್ಲ. ಇದೀಗ ಕಿರೀಟಿ ಸಿನಿಮಾದ ಟೈಟಲ್ ಲಾಂಚ್ ಗೆ ವೇದಿಕೆ ಸಿದ್ದವಾಗಿದೆ. ಕಿರೀಟಿ ನಾಳೆ (ಸೆ.29)ರಂದು ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಂದೇ ಸಿನಿಮಾದ ಟೈಟಲ್ ಲಾಂಚ್ ಆಗಲಿದೆ ಎಂಬ ಮಾತು ಕೇಳಿ ಬರ್ತಿದೆ. ಸದ್ಯದ ಮಾಹಿತಿ ಪ್ರಕಾರ ನಾಳೆ ಸಂಜೆ ಸಂಜೆ  6.39ಕ್ಕೆ ವಾರಾಹಿ ಚಲನಚಿತ್ರ ಯೂಟ್ಯೂಬ್ ಚಾನೆಲ್ ನಲ್ಲಿ ಕಿರೀಟಿ ಮೊದಲ ಚಿತ್ರದ ಟೈಟಲ್ ಲಾಂಚ್ ವೀಡಿಯೋ ಬಿಡುಗಡೆಯಾಗೋದು ಪಕ್ಕ ಎನ್ನಲಾಗುತ್ತಿದೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಈ ಸಿನಿಮಾಗೆ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಬಂಡವಾಳ ಹೂಡಿದೆ. ಇದು ವಾರಾಹಿ ಸಂಸ್ಥೆಯ 15ನೇ ಸಿನಿಮಾವಾಗಿದ್ದು ಸಾಕಷ್ಟು ಅದ್ದೂರಿಯಾಗಿ ಸಿನಿಮಾ ರೆಡಿಯಾಗುತ್ತಿದೆ. ಕನ್ನಡ ಜೊತೆಗೆ ತೆಲುಗಿನಲ್ಲೂ ಈ ಸಿನಿಮಾ ನಿರ್ಮಾಣವಾಗಿದ್ದು ದೊಡ್ಡ ದೊಡ್ಡ ಕಲಾವಿದರು ಬಣ್ಣ ಹಚ್ಚಿದ್ದಾರೆ. ಕಿರೀಟಿ ಸಿನಿಮಾದ ಮೂಲಕ ಸಾಕಷ್ಟು ವರ್ಷಗಳ ಬಳಿಕ ನಟಿ ಜೆನಿಲಿಯಾ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರೆ. ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಕಿರೀಟಿಗೆ ಸಾಥ್ ನೀಡಿದ್ದಾರೆ. ಮೊದಲ ಸಿನಿಮಾದಲ್ಲೇ ಸಾಕಷ್ಟು ಭರವಸೆ ಮೂಡಿಸಿರೋ ಕಿರೀಟಿ ನಟನೆಯ ಸಿನಿಮಾದ ಶೀರ್ಷಿಕೆ ಏನಿರಲಿದೆ ಅನ್ನೋ ಕುತೂಹಲ ಈಗಾಗ್ಲೆ ಶುರುವಾಗಿದ್ದು ಅದಕ್ಕೆಲ್ಲಾ ಉತ್ತರ ನಾಳೆ ಸಂಜೆ ಸಿಗಲಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now