• February 10, 2026

ಸ್ಟಂಟ್ ದೃಶ್ಯ ಮಾಡುವಾಗ ಕಾಲು ಮುರಿದುಕೊಂಡ ಟೈಗರ್ ಶ್ರಾಫ್: ವಿಡಿಯೋ ವೈರಲ್

ಸಿನಿಮಾ ರಿಯಲಿಸ್ಟಿಕ್ ಆಗಿ ಮೂಡಿ ಬರಬೇಕು ಅನ್ನೋ ಕಾರಣಕ್ಕೆ ಕಲಾವಿದರು ಸಾಕಷ್ಟು ಸಾಹಸಗಳಿಗೆ ಕೈ ಹಾಕುತ್ತಿದ್ದಾರೆ. ಅದೆಷ್ಟೋ ನಟ, ನಟಿಯರು ಡ್ಯೂಪ್ ಇಲ್ಲದೆ ಸ್ಟಂಟ್ ಮಾಡಲು ಹೋಗಿ ಕೈ ಕಾಲು ಮುರಿದುಕೊಂಡಿದ್ದು ಗೊತ್ತೆ ಇದೆ. ಇದೀಗ ಬಿಟೌನ್ ನಟ ಟೈಗರ್ ಶ್ರಾಫ್ ಸ್ಟಂಟ್ ಮಾಡವ ವೇಳೆ ಕಾಲು ಮುರಿದುಕೊಂಡಿದ್ದಾರೆ. ಇತ್ತೀಚೆಗಷ್ಟೇ ನಟಿ ಶಿಲ್ಪಾ ಶೆಟ್ಟಿ ಸ್ಟಂಟ್ ಮಾಡುವ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಘಟನೆ ನಡೆದು ಒಂದು ತಿಂಗಳಾಗುತ್ತ ಬಂದಿದ್ದರು ಇನ್ನೂ ಶಿಲ್ಪಾ ಶೆಟ್ಟಿ ಕಾಲು ಸಂಪೂರ್ಣವಾಗಿ ಗುಣಮುಖವಾಗಿಲ್ಲ. ಇದೀಗ ನಟ ಟೈಗರ್ ಶ್ರಾಫ್ ಕೂಡ ಸ್ಟಂಟ್ ಮಾಡಲು ಹೋಗಿ ಕಾಲು ಮುರಿದುಕೊಂಡಿದ್ದಾರೆ. ಈ ಬಗ್ಗೆ ಟೈಟರ್ ಶ್ರಾಫ್ ಇನ್ಸ್ ಗ್ರಾಂ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿದ್ದುಘಟನೆಯ ಕುರಿತು ಬರೆದುಕೊಂಡಿದ್ದಾರೆ. ಕಾಂಕ್ರೀಟ್ ವಾಶ್ ಬೇಸಿನ್ ಒಡೆಯುವಾಗ ನನ್ನ ಕಾಲು ಮುರಿದಿದೆ. ನಾನು ಬಲಶಾಲಿಯಾಗಿದ್ದೇನೆ ಅದನ್ನು ಮುರಿಯುತ್ತೇನೆ ಎಂದು ಭಾವಿಸಿದ್ದೆ ಆದ್ರೆ, ಕಾಲು ಮುರಿತು.. ನಾನು ವಾಶ್‌ ಬೇಸಿನ್‌ ಪುಡಿ ಮಾಡದೇ ಬಿಡಲಿಲ್ಲ ಎಂದಿದ್ದಾರೆ. ಟೈಗರ್ ಶ್ರಾಫ್ ಆಕ್ಷನ್ ಮತ್ತು ಸ್ಟಂಟ್ ಸಿನಿಮಾಗಳಿಂದಲೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿದ್ದಾರೆ. ಟೈಗರ್ ಶ್ರಾಫ್ ಅವರ ಸಾಕಷ್ಟು ಸಾಹಸ ಚಿತ್ರಗಳು ಹಿಟ್‌ ಆಗಿವೆ. ಸದ್ಯದಲ್ಲೇ ಟೈಗರ್ ಶ್ರಾಫ್ ‘ಬಡೇ ಮಿಯಾನ್ ಚೋಟೆ ಮಿಯಾನ್ʼ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಗಣಪತ್ ಚಿತ್ರದಲ್ಲಿ ಟೈಗರ್ ಜೊತೆಗೆ ಕೃತಿ ಸನೋನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now