ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ದುಬಾರಿ ಬೆಲೆಗೆ ಸೇಲ್ ಆಯ್ತು ‘ಮಾನ್ಸೂನ್ ರಾಗ’ ದ ಟಿವಿ ಹಾಗೂ ಓಟಿಟಿ ರೈಟ್ಸ್
ಮಾನ್ಸೂನ್ ರಾಗ ಪಕ್ಕಾ ರೊಮ್ಯಾಂಟಿಕ್ ಲವ್‌ಸ್ಟೋರಿ ಇರುವ ಚಿತ್ರವಾಗಿದ್ದು, ತನ್ನ ವಿಭಿನ್ನ ಟೀಸರ್ ಹಾಗೂ ಹಾಡಿನ ಮೂಲಕವೇ ಸಿನಿಪ್ರಿಯರ ಗಮನ ಸೆಳೆದಿದೆ. ಧನಂಜಯ್ ಗೆ ಜೋಡಿಯಾಗಿ ಇದೇ ಮೊದಲ ಭಾರಿಗೆ ನಟಿ ರಚಿತಾ ರಾಮ್ ಬಣ್ಣ ಹಚ್ಚಿದ್ದು ಇವರಿಬ್ಬರ ಕಾಂಬಿನೇಷನ್ ನ ಸಿನಿಮಾ ನೋಡೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ.
ವಿಖ್ಯಾತ್ ಎ.ಆರ್ ನಿರ್ಮಾಣ ಮಾಡಿರುವ ಮಾನ್ಸೂನ್ ರಾಗ ಸಾಕಷ್ಟು ಅದ್ದೂರಿಯಾಗಿ ನಿರ್ಮಾಣವಾಗಿದ್ದು ಇಡೀ ಚಿತ್ರದ ಕಥೆ ಮುಂಗಾರು ಮಳೆಯೊಳಗೇ ನಡೆಯುತ್ತದೆ ಎನ್ನಲಾಗಿದ್ದು, ಟೀಸರ್‌ನಲ್ಲಿ ಮಳೆಯ ಜೊತೆಗೆ ನೆರಳು ಬೆಳಕಿನ ಹಿನ್ನೆಲೆಯ ಚಿತ್ರೀಕರಣವೂ ಸೊಗಸಾಗಿ ಮೂಡಿಬಂದದೆ. ಎಸ್.ಕೆ. ರಾವ್ ಅವರ ಸಿನಿಮಾಟೋಗ್ರಫಿ ಈ ಚಿತ್ರಕ್ಕಿದ್ದು, ಚಿತ್ರದ ಸುಂದರ ಹಾಡುಗಳಿಗೆ ಅನೂಪ್ ಸೀಳಿನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಮಾನ್ಸೂನ್ ರಾಗ್ ಬಿಡುಗಡೆಗೂ ಮೊದಲೇ ಭರ್ಜರಿ ಕಲೆಕ್ಷನ್ ಮಾಡಿದೆ. ಮೂಲಗಳ ಪ್ರಕಾರ ಸಿನಿಮಾದ ಟಿವಿ ಹಾಗೂ ಓಟಿಟಿ ರೈಟ್ಸ್ ಅನ್ನು ಝೀ ಕನ್ನಡ 3 ಕೋಟಿಗೆ ತೆಗೆದುಕೊಂಡಿದೆ ಎನ್ನಲಾಗುತ್ತಿದೆ.
‘ಮಾನ್ಸೂನ್ ರಾಗ’ ಸಿನಿಮಾದ ಪೋಸ್ಟರ್ ಅನ್ನು ಮೋಹಕತಾರೆ ರಮ್ಯಾ ಶೇರ್ ಮಾಡಿದ್ದಾರೆ. ಅಲ್ಲದೆ ರಚಿತಾ ರಾಮ್, ಧನಂಜಯ್‌ರನ್ನು ಟ್ಯಾಗ್ ಮಾಡಿ ‘ಮಾನ್ಸೂನ್ ರಾಗ’ ತಂಡಕ್ಕೆ ಶುಭಕೋರಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನು ಮೂರು ದಿನ ಬಾಕಿ ಇರುವಾಗಲೇ ಚಿತ್ರರಂಗಕ್ಕೆ ರಮ್ಯಾ ಬೆಂಬಲ ನೀಡಿದ್ದು ಮತ್ತಷ್ಟು ಪವರ್ ಬಂದತಾಗಿದೆ.
