ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಅನಿರುದ್ಧ್ ಇಲ್ಲದೆ ನಡೆಯಿತು ‘ಜೊತೆ ಜೊತೆಯಲಿ’ ಧಾರವಾಹಿ ಶೂಟಿಂಗ್
ಈ ಮೂಲಕ ಅನಿರುದ್ಧ್ ಇಲ್ಲದೆಯೂ ಧಾರವಾಹಿ ಮುಂದುವರೆಯುತ್ತದೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಕಳೆದ ಕೆಲ ದಿನಗಳಿಂದ ಅನಿರುದ್ಧ್ ಸೆಟ್ ನಲ್ಲಿ ಅಸಹಕಾರ ತೋರಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಅನಿರುದ್ಧ್ ವರ್ತನೆ ಮತ್ತಷ್ಟ ಬದಲಾಗಿದ್ದು ಇದರಿಂದ ಧಾರವಾಹಿ ತಂಡ ಬೇಸತ್ತುಹೋಗಿದೆ. ಇದೇ ಕಾರಣದಿಂದ ಅನಿರುದ್ಧ್ ರನ್ನು ಧಾರವಾಹಿ ತಂಡದಿಂದ ಕೈ ಬಿಡುವ ಕುರಿತು ಮಾತುಕತೆ ನಡೆಯುತ್ತಿದೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಅನಿರುದ್ಧ್ ಒಂದು ವೇಳೆ ಧಾರವಾಹಿಯಿಂದ ಕೈ ಬಿಟ್ಟರೆ ಪತ್ರಿಕಾಗೋಷ್ಠಿ ಮಾಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ನಿರ್ಮಾಪಕ ಜಗದೀಶ್ ಹಾಗೂ ನಿರ್ದೇಶಕ ಆರೂರು ಜಗದೀಶ್ ಕೂರಿಸಿಕೊಂಡು ವಾಹಿನಿಯು ಮಾತನಾಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
