• December 22, 2025

‘ಸ್ಕಂದ’ ಚಿತ್ರದ ಫಸ್ಟ್ ಸಾಂಗ್..ಉಸ್ತಾದ್ ರಾಮ್ ಪೋತಿನೇನಿ-ಶ್ರೀಲೀಲಾ ಡ್ಯಾನ್ಸ್ ಫ್ಲೋರ್…

ಉಸ್ತಾದ್ ರಾಮ್ ಪೋತಿನೇನಿ ಹಾಗೂ ಬೋಯಾಪಾಟಿ ಶ್ರೀನು ಕಾಂಬಿನೇಷನ್ ಮಾಸ್ ಆಕ್ಷನ್ ಎಂಟರ್ ಟೈನರ್ ಸ್ಕಂದ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ನಿನ್ ಸುತ್ತ ಸುತ್ತ ತಿರುಗಿದೆ ಎಂಬ ಗಾನಬಜಾನಕ್ಕೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದು, ಸಂತೋಷ್ ವೆಂಕಿ ಹಾಗೂ ಶ್ರೀನಿಧಿ ತಿರುಮಲ ಕಂಠ ಕುಣಿಸಿದ್ದಾರೆ. ಎಸ್ ಎಸ್ ತಮನ್ ಟ್ಯೂನ್, ರಾಮ್ ಎನರ್ಜಿ, ಶ್ರೀಲೀಲಾ ಗ್ಲಾಮರ್ ರಂಗು, ಅದ್ಧೂರಿ ಸೆಟ್ ಹಾಡಿನ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ಐದು ಭಾಷೆಯಲ್ಲಿಯೂ ಸ್ಕಂದ ಹಾಡು ಬಿಡುಗಡೆಯಾಗಿದೆ.   ಲವರ್ ಬಾಯ್ ಆಗಿ ಮಿಂಚುತ್ತಿದ್ದ ರಾಮ್ ಪೋತಿನೇನಿ ಮೊದಲ ಬಾರಿಗೆ ಸ್ಕಂದ ಸಿನಿಮಾಗಾಗಿ ಮಾಸ್ ಅವತಾರ ತಾಳಿದ್ದಾರೆ. ಕನ್ನಡತಿ ಶ್ರೀಲೀಲಾ ರಾಮ್ ಗೆ ಜೋಡಿಯಾಗಿ ನಟಿಸಿದ್ದಾರೆ. ಸಂತೋಷ್ ಡಿಟೇಕ್ ಕ್ಯಾಮೆರಾ ವರ್ಕ್, ತಮನ್ ಎಸ್ ಎಸ್ ಸಂಗೀತ ಚಿತ್ರಕ್ಕಿದೆ. ಸ್ಕಂದ ಚಿತ್ರವನ್ನು ಶ್ರೀನಿವಾಸ್ ಸಿಲ್ವರ್ ಸ್ಕ್ರೀನ್ ಬ್ಯಾನರ್ ನಡಿ ಶ್ರೀನಿವಾಸ್ ಚಿತ್ತೂರಿ ನಿರ್ಮಾಣ ಮಾಡಿದ್ದಾರೆ. ಜೀ ಸ್ಟುಡಿಯೋಸ್ ಸೌತ್ ಹಾಗೂ ಪವನ್ ಕುಮಾರ್ ಅರ್ಪಿಸುತ್ತಿರುವ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ. ಸ್ಕಂದ ಸಿನಿಮಾವನ್ನು ದಸರಾ ಸ್ಪೆಷಲ್ ಆಗಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿತ್ತು. ಆದರೆ ದಸರಾಗೂ ಮೊದ್ಲೇ ಅಂದರೆ ಸೆಪ್ಟಂಬರ್ 15ರಂದು ರಾಮ್ ಪೋತಿನೇನಿ ಹಾಗೂ ಬೋಯಾಪಾಟಿ ಚಿತ್ರ ತೆರೆಕಾಣಲಿದೆ. ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿಯೂ ಸ್ಕಂದ ಬಿಡುಗಡೆಯಾಗಲಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now