ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸಿನಿಮಾರಂಗದಲ್ಲೀಗ NFT ಜಮಾನ ಶುರುವಾಗಿದೆ.
ಎನ್‌ಎಫ್‌ಟಿಗಳನ್ನು ಬದಲಾಯಿಸಲಾಗದಿರುವುದು ಎಂಬುದಾಗಿ ಪರಿಗಣಿಸಲಾಗಿದೆ, ಏಕೆಂದರೆ ಅದು ಅನನ್ಯ ಅಂಶಗಳನ್ನು ಒಳಗೊಂಡಿವೆ, ಹಾಗಾಗಿ ಅದನ್ನು ಬೇರೆ ಯಾವುದೇ ಸರಕು ಇಲ್ಲವೇ ಸ್ವತ್ತಿನೊಂದಿಗೆ ವಿನಿಮಯ ಮಾಡಿಕೊಳ್ಳಲಾಗುವುದಿಲ್ಲ. ಇದು ಒಂದು ಮನೆಯಾಗಿರಬಹುದು ಇಲ್ಲವೇ ಚಿತ್ರಕಲೆಯಾಗಿರಬಹುದು. ನೀವು ಚಿತ್ರಕಲೆಯ ಫೋಟೋ ತೆಗೆಯಬಹುದು ಅಥವಾ ಅದರ ಪ್ರಿಂಟ್ ಖರೀದಿಸಬಹುದು. ಆದರೆ ಮೂಲ ಚಿತ್ರಕಲೆ ಒಂದೇ ಆಗಿರುತ್ತದೆ. ಅದಕ್ಕೆ ಸಮಾನವಾದುದು ಇನ್ನೊಂದಿರುವುದಿಲ್ಲ.
ಮಾರ್ವೆಲ್ಸ್ ಸಿನಿಮಾ ಬಳಿಕ ಭಾರತೀಯ ಸಿನಿಮಾಗಳು NFT ಮಾರುಕಟ್ಟೆಯಲ್ಲಿ ರಾರಾಜಿಸಲು ಸಿದ್ಧವಾಗಿವೆ. ಪ್ಯಾನ್ ಇಂಡಿಯಾ ಸಿನಿಮಾ ಕಾನ್ಸೆಪ್ಟ್ ನಡಿ ಡಿಜಿಟಲ್ ಲೋಕದಲ್ಲಿ NFT ಹೊಸ ಕ್ರಾಂತಿಗೆ ನಾಂದಿ ಹಾಡಲು ಸಜ್ಜಾಗಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ವೊಬ್ಬರು ತಮ್ಮದೇ ಸ್ವತಃ ಮಾರುಕಟ್ಟೆಯಲ್ಲಿ ಸಿನಿಮಾ ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ NFT ವಲಯದಲ್ಲಿ ಭಾರತೀಯ ಚಿತ್ರರಂಗ ದಾಖಲೆ ಬರೆಯುವ ನಿರೀಕ್ಷೆಯಲ್ಲಿದೆ.
NFTಯಲ್ಲಿ ಬಿಡುಗಡೆಯಾಲಿವೆ ಈ ಸಿನಿಮಾಗಳು?
ಕೆಜಿಎಫ್ ಬಳಿಕ NFT ವಲಯಕ್ಕೆ ಸದ್ಯ ಪ್ಯಾನ್ ಇಂಡಿಯಾ ಸಿನಿಮಾ ರಾಕೆಟ್ರಿ ಪ್ರವೇಶಿಸಿದೆ. ಇದಾದ ಬಳಿಕ
ಲಾಲ್ ಸಿಂಗ್ ಚಡ್ಡಾ, ಸಲಾರ್, ಆದಿಪುರುಷ, ಬ್ರಹ್ಮಾಸ್ತ್ರ ಸೇರಿದಂತೆ ಹಲವು ಸಿನಿಮಾಗಳು ಎಂಟ್ರಿ ಕೊಡಲಿವೆ ಎನ್ನಲಾಗ್ತಿದೆ. ಕೇವಲ ಪ್ಯಾನ್ ಇಂಡಿಯಾ ಸಿನಿಮಾ ಮಾತ್ರವಲ್ಲ ಸ್ಯಾಂಡಲ್ ವುಡ್ ಚಿತ್ರರಂಗ ಕೂಡ NFT ಮಾರುಕಟ್ಟೆಯನ್ನು ನಿರೀಕ್ಷಿಸುತ್ತಿದೆ. ಮೆಟಾವರ್ಸ್ ಮೂಲಕ ತಮ್ಮ ನೆಚ್ಚಿನ ಸ್ಟಾರ್ಸ್ ಭೇಟಿಯಾಗಲು ಫ್ಯಾನ್ಸ್ ಕಾತುರರಾಗಿದ್ದಾರೆ. ದುಬೈ ಟೆಕ್ ಕಂಪನಿಯೊಂದು ಇಂಡಿಯನ್ ಸ್ಟಾರ್ ಜೊತೆ ಕೈ ಜೋಡಿಸಿದ್ದು, NFT ಮಾರುಕಟ್ಟೆಗೆ ಕನ್ನಡ ಚಿತ್ರರಂಗ ಉತ್ತಮ ವೇದಿಕೆಯಾಗಿದೆ.
