• March 14, 2026

ತಳುವಿನಲ್ಲೂ ತೆರೆಕಾಣಲಿದೆ ಕಾಂತಾರ ಚಿತ್ರ: ರಿಷಬ್ ಶೆಟ್ಟಿ

ಕನ್ನಡ ಭಾಷೆಯಲ್ಲಿ ತೆರೆಕಂಡ ಕಾಂತಾರ ಚಿತ್ರ ದೊಡ್ಟ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬಾಕ್ಸ್ ಅಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುವ ಮೂಲಕ ಈ ಹಿಂದಿನ ಸಿನಿಮಾಗಳ ದಾಖಲೆಯನ್ನು ಕಾಂತಾರ ಮುರಿಯುತ್ತಿದೆ. ತುಳುನಾಡಿನ ಆರಾದ್ಯ ದೈವದ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಕಾಂತಾರ ಚಿತ್ರವನ್ನು ತುಳುವಿಗೂ ಡಬ್ ಮಾಡಬೇಕು ಎನ್ನುವುದು ನಿರ್ಮಾಪಕ ವಿಜಯ್ ಕಿರಗಂದೂರು ಆಸೆಯಂತೆ. ಹಾಗಾಗಿ ಈ ಸಿನಿಮಾವನ್ನು ತುಳುವಿಗೂ ಡಬ್ ಮಾಡಲು ಮುಂದಾಗಿದೆ ಚಿತ್ರತಂಡ. ಈ ಬಗ್ಗೆ ಧರ್ಮಸ್ಥಳದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ‘ಕಾಂತಾರ ಸಿನಿಮಾವನ್ನು ತುಳು ಭಾಷೆಗೆ ಡಬ್ ಮಾಡಬೇಕು ಎನ್ನುವುದು ನಿರ್ಮಾಪಕರ ಆಸೆ. ಹಾಗಾಗಿ ಈ ಚಿತ್ರವನ್ನು ತುಳುಗೆ ಡಬ್ ಮಾಡಲಾಗುತ್ತದೆ. ಈಗಾಗಲೇ ಸಿನಿಮಾ ಎಲ್ಲ ಕಡೆ ಪ್ರದರ್ಶನ ಕಂಡಿದೆ. ದಾಖಲೆ ರೀತಿಯಲ್ಲಿ ಗೆಲುವು ಸಾಧಿಸಿದೆ. ಇದೆಲ್ಲ ಸಾಧ್ಯವಾಗಿದ್ದು ದೈವದ ಕಾರಣದಿಂದ. ಹಾಗಾಗಿ ಈ ಸಿನಿಮಾವನ್ನು ತುಳುವಿನಲ್ಲೂ ಡಬ್ ಮಾಡಲು ಯೋಚನೆ ಮಾಡಿದ್ದೇವೆ. ಆದಷ್ಟು ಬೇಗ ಮಾಡಲಾಗುವುದು’ ಎಂದಿದ್ದಾರೆ. ಕಾಂತಾರ ಸಿನಿಮಾದ ಕೊನೆಯಲ್ಲಿ ಬರುವ ಕಾಂತಾರ ಚಿತ್ರ ಕೂಡ ಚಿತ್ರದ ಯಶಸ್ಸಿಗೆ ಒಂದು ಕಾರಣವಾಗಿತ್ತು. ಆದರೆ ಈ ಹಾಡಿನ ಟ್ಯೂನ್ ಕದ್ದ ಆರೋಪ ಕೇಳಿ ಬಂದಿತ್ತು. ಇತ್ತೀಚೆಗಷ್ಟೇ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್‍ ನ ಸದಸ್ಯರು ಕೋರ್ಟಿಗೆ ಮೊರೆ ಹೋಗಿದ್ದರು. ಹಾಗಾಗಿ ಕೋಯಿಕ್ಕೋಡ್ ಕೋರ್ಟ್ ಸಿನಿಮಾದಲ್ಲಿ ಈ ಹಾಡು ಬಳಸದಂತೆ ತಡೆಯಾಜ್ಞೆ ನೀಡಿತ್ತು.  ಆದರೂ  ಚಿತ್ರದಲ್ಲಿ ಹಾಡನ್ನು ಮುಂದುವರೆಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ರಿಷಬ್ ಶೆಟ್ಟಿ,  ಯಾವುದೇ ಕಾರಣಕ್ಕೂ ಅದು ಕದ್ದ ಮ್ಯೂಸಿಕ್ ಅಲ್ಲ ಎಂದಿದ್ದಾರೆ.  ಸುಖಾಸುಮ್ಮನೆ ಜನರನ್ನು ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಯಾರೇ ಕೇಳಿದರೂ, ನಾವು ಅದನ್ನು ಕದ್ದ ಹಾಡಲ್ಲ ಎಂದು ಸಾಬೀತು ಪಡಿಸುತ್ತೇವೆ ಎಂದಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now