• June 19, 2026

ಆ ನಟನಿಗೆ ಕಿಸ್ ಮಾಡುವ ಆಸೆ ಇತ್ತು: ರಾಮ್ ಗೋಪಾಲ್ ವರ್ಮಾ

ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಸದಾ ಸುದ್ದಿಯಲ್ಲಿರ್ತಾರೆ. ಒಂದು ಕಾಲದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡ್ತಿದ್ದ ವರ್ಮಾ ಇತ್ತೀಚೆಗೆ ಅಂತಾಹ ಯಾವುದೇ ಹಿಟ್ ಸಿನಿಮಾಗಳನ್ನ ನೀಡ್ತಿಲ್ಲ ಅನ್ನೋ ಬೇಸರ ಅವರ ಅಭಿಮಾನಿಗಳಲ್ಲಿದೆ. ಸಿನಿಮಾ ಹಿಟ್ ಆಗದೆ ಹೋದ್ರು ಅವರ ಚಿತ್ರಗಳು ವಿವಾದದ ಮೂಲಕವಾದ್ರು ಸುದ್ದಿ ಮಾಡ್ತಾವೆ ಅನ್ನೋದಕ್ಕೆ ಇತ್ತೀಚೆಗೆ ಬಿಡುಗಡೆ ಆಗ್ತಿರೋ ಸಿನಿಮಾಗಳೇ ಸಾಕ್ಷಿ. ಇತ್ತೀಚೆಗೆ ರಾಮ್ ಗೋಪಾಲ್ ವರ್ಮಾ ಲಡ್ಕಿ ಸಿನಿಮಾ ನಿರ್ದೇಶನ ಮಾಡ್ತಿದ್ದು ಈ ಸಿನಿಮಾ ಹುಡುಗಿ ಹೆಸರಿನಲ್ಲಿ ಕನ್ನಡದಲ್ಲೂ ತೆರೆಗೆ ಬರ್ತಿದೆ. ಈ ಸಿನಿಮಾದ ಪ್ರಚಾರ ಕಾರ್ಯಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ವರ್ಮಾ ಸಾಕಷ್ಟು ವಿಷಯಗಳ ಕುರಿತು ಮಾತನಾಡಿದ್ದಾರೆ. ಇದರ ಜೊತೆಗೆ ವರ್ಮಾ ನೀಡಿದ ಹೇಳಿಕೆಯೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಮಾರ್ಷಲ್ ಆರ್ಟ್ಸ್ನಲ್ಲಿ ವಿಶ್ವಾದ್ಯಂತ ಖ್ಯಾತ ಘಳಿಸಿರುವ ಬ್ರೂಸ್ ಲೀ ಸಿನಿಮಾಗಳ ಮೂಲಕ ಲಕ್ಷಾಂತರ ಅಭಿಮಾನಿಗಳನ್ನ ಹೊಂದಿದ್ದಾರೆ. ಬ್ರೂಸ್ಲಿಯಿಂದ ಪ್ರೇರಣೆಗೊಂಡ ವರ್ಮಾ ಲಡ್ಕಿ ಸಿನಿಮಾ ನಿರ್ದೇಶಿಸಿದ್ದು ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ. ಬ್ರೂಸ್ ಲೀ ಬಗ್ಗೆ ರಾಮ್ ಗೋಪಾಲ್ ವರ್ಮಾರಿಗೆ ವಿಪರೀತ ಸೆಳೆತವಿದ್ದು, ಅವರಿಗೆ ಕಿಸ್ ಮಾಡುವ ಆಸೆ ಇತ್ತು ಎಂದು ವರ್ಮಾ ಹೇಳಿಕೊಂಡಿದ್ದಾರೆ. ನಾನು ಸಲಿಂಗಕಾಮಿ ಅಲ್ಲ. ಆದರೂ ನನಗೆ ಬ್ರೂಸ್ ಲೀ ಅವರ ಬಗ್ಗೆ ವಿಶೇಷವಾದ ಸೆಳೆತ ಇತ್ತು. ನಾನು ಕಿಸ್ ಮಾಡಬೇಕು ಎಂದು ಬಯಸಿದ ಏಕೈಕ ಪುರುಷ ಎಂದರೆ ಅದು ಬ್ರೂಸ್ ಲೀ ಎಂದು ವರ್ಮಾ ಹೇಳಿದ್ದಾರೆ. ಇದೇ ಕಾರಣಕ್ಕೆ ಬ್ರೂಸ್ ಲೀ ಇಂದ ಪ್ರೇರಣೆ ಪಡೆದು ಲಡ್ಕಿ ಸಿನಿಮಾ ನಿರ್ದೇಶಿಸಿದ್ದು ಚಿತ್ರದಲ್ಲಿ ನಟಿ ಪೂಜಾ ಭಾಲೇಕರ್ ಮಾರ್ಷಲ್ ಆರ್ಟ್ಸ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಲಡ್ಕಿ ಸಿನಿಮಾ ಜು15ರಂದು ತೆರೆಗೆ ಬರಲಿದೆ

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now