• January 1, 2026

ಚಂದನ್ ಪ್ರಕಣದಕ್ಕೆ ಹೊಸ ಟ್ವಿಸ್ಟ್: ಪ್ರೆಸ್ ಮೀಟ್ ಗೂ ಮುನ್ನವೇ ಬ್ಯಾನ್ ಆಗಿದ್ರಾ ಚಂದನ್

ಕಳೆದ ಒಂದೆರಡು ದಿನಗಳಿಂದ ನಟ ಚಂದನ್ ಕುಮಾರ್ ಮೇಲೆ ತೆಲುಗು ಧಾರವಾಹಿ ಚಿತ್ರೀಕರಣದ ವೇಳೆ ನಡೆದ ಹಲ್ಲೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ಬಗ್ಗೆ ಪ್ರೆಸ್ ಮೀಟ್ ಮಾಡಿದ್ದ ಚಂದನ್ ನಾನು ಬೇರೆ ಭಾಷೆಯವನು ಅನ್ನೋ ಕಾರಣಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ.ಇದೆಲ್ಲಾ ಪ್ರೀಪ್ಯಾನ್ಡ್ ಎನಿಸುತ್ತದೆ ಎಂದಿದ್ದಾರೆ. ಈ ಬೆನ್ನಲ್ಲೇ ಹೊಸ ವಿಷಯವೊಂದು ಇದೀಗ ಸುದ್ದಿಯಾಗಿದೆ. ಚಂದನ್ ತೆಲುಗು ಧಾರವಾಹಿಯಿಂದ ಹೊರ ಬರುವ ಮುನ್ನವೇ ಅವರನ್ನು ತೆಲುಗು ಚಿತ್ರರಂಗ ಬ್ಯಾನ್ ಮಾಡಿತ್ತಾ ಎಂಬ ಅನುಮಾನ ವ್ಯಕ್ತವಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಚಂದನ್ ನಾನು ಇನ್ನು ಮುಂದೆ ತೆಲುಗು ಸೀರಿಯಲ್ ನಟಿಸಲ್ಲ ಎಂದಿದ್ದಾರೆ. ಈ ಮಧ್ಯೆ ತೆಲುಗಿನ ಟಿಲಿವಿಶನ್ ಟೆಕ್ನೀಶಿಯನ್ಸ್ ಮತ್ತು ವರ್ಕರ್ಸ್ ಫೆಡರೇಶನ್ ಬರೆದಿರುವ ಪತ್ರವೊಂದು ವೈರಲ್ ಆಗಿದ್ದು, ಚಂದನ್ ಹಲ್ಲೆಯ ಕಥೆಗೆ ಬೇರೆಯದ್ದೇ ಟ್ವಿಸ್ಟ್ ಸಿಕ್ಕಿದೆ. ಚಂದನ್ ತೆಲುಗಿನ ಸಾವಿತ್ರಿ ಸೀರಿಯಲ್ ಧಾರವಾಹಿಯ ಚಿತ್ರೀಕರಣ ನಡೆಯುತ್ತಿತ್ತು. ಮಧ್ಯಾಹ್ನದ ಲಂಚ್ ಸಮಯದಲ್ಲಿ  ನಿಮಿಷ ನಿದ್ದೆ ಮಾಡಿದೆ. ಆಗ ಸಹಾಯಕ ನಿರ್ದೇಶಕ 3 ರಿಂದ 4 ಬಾರಿ ಶಾಟ್‌ಗೆ ಬರುವಂತೆ ಹೇಳಿದ್ದಾರೆ. ಬರುತ್ತೇನೆ ಎಂದ ಚಂದನ್ ರನ್ನ ಅಲ್ಲಿದ್ದವರು ಏಕವಚನದಲ್ಲಿ ಮಾತನಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಚಂದನ್ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಚಂದನ್ ಪ್ರೆಸ್ ಮೀಟ್ ಮಾಡುವುದಕ್ಕೂ ಮುನ್ನವೇ ತೆಲುಗು ಚಿತ್ರರಂಗದಿಂದ ಬ್ಯಾನ್ ಆಗಿದ್ರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ನಟ ಚಂದನ್ ಈಗಾಗಲೇ ಹೇಳಿರುವ ವಿಚಾರವೇ ಬೇರೆ, ಈ ಪತ್ರದಲ್ಲಿ ಇರೋದೇ ಬೇರೇ. ಚಂದನ್ ಪ್ರೆಸ್ ಮೀಟ್ ಮಾಡುವ ಮುನ್ನವೇ ಬ್ಯಾನ್ ಆಗಿದ್ರಾ ಎಂಬ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now